Select Your Language

Notifications

webdunia
webdunia
webdunia
webdunia

ಪ್ಯಾರಾ ಶೂಟಿಂಗ್ ವಿಶ್ವಕಪ್ ನಲ್ಲಿ ಅವಾನಿ ಲೇಖಾರಾ ವಿಶ್ವದಾಖಲೆ!

ಪ್ಯಾರಾ ಶೂಟಿಂಗ್ ವಿಶ್ವಕಪ್ ನಲ್ಲಿ ಅವಾನಿ ಲೇಖಾರಾ ವಿಶ್ವದಾಖಲೆ!
bengaluru , ಬುಧವಾರ, 8 ಜೂನ್ 2022 (21:40 IST)

ಭಾರತದ ಅವಾನಿ ಲೇಖಾರಾ ಪ್ಯಾರಾ ಶೂಟಿಂಗ್ ವಿಶ್ವಕಪ್ ನಲ್ಲಿ ವಿಶ್ವದಾಖಲೆ ಬರೆಯುವ ಮೂಲಕ ಸ್ವರ್ಣ ಪದಕ ವಿಜೇತರಾಗಿದ್ದಾರೆ.

ಫ್ರಾನ್ಸ್ ನ ಚಟೆರೊಬಾಕ್ಸ್ ನಲ್ಲಿ ಮಂಗಳವಾರ ನಡೆದ ವನಿತೆಯರ 10ಮೀ. ಏರ್ ರೈಫಲ್ಸ್ ಫೈನಲ್ ನಲ್ಲಿ ಅವಾನಿ ಲೇಖಾರಾ 250.6 ಅಂಕ ಪಡೆಯುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

20 ವರ್ಷದ ಅವಾನಿ ಲೇಖಾರಾ 249.6 ಅಂಕ ಗಳಿಸುವ ಮೂಲಕ ವಿಶ್ವದಾಖಲೆಯೊಂದಿಗೆ ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ಆಗಿದ್ದರು. ಆದರೆ ಈ ಬಾರಿ ತಮ್ಮದೇ ದಾಖಲೆ ಮುರಿದು ಮತ್ತೊಂದು ದಾಖಲೆ ಬರೆದಿದ್ದಾರೆ.

ಪೋಲೆಂಡ್ ನ ಎಮಿಲಾ ಬಾಬ್ ಸ್ಕಾ 247.6 ಅಂಕ ಗಳಿಸಿ ಬೆಳ್ಳಿ ಪದಕ ಗೆದ್ದರೆ, ಸ್ವೀಡನ್ ನ ಆನಾ ನೊರ್ಮನ್ ಕಂಚಿನ ಪದಕ ವಿಜೇತರಾದರು.


Share this Story:

Follow Webdunia kannada

ಮುಂದಿನ ಸುದ್ದಿ

ಗಾಯಾಳು ಕೆಎಲ್ ರಾಹುಲ್ ಟಿ-20 ಸರಣಿಯಿಂದ ಔಟ್: ಪಂತ್ ಗೆ ಒಲಿದ ನಾಯಕ ಪಟ್ಟ!