ಏಷ್ಯನ್ ಗೇಮ್ಸ್: ಕ್ರಿಕೆಟ್, ಕಬಡ್ಡಿ ಸೇರಿದಂತೆ ಭಾರತಕ್ಕೆ ಇಂದು ಪದಕದ ಮಳೆ

Webdunia
ಶನಿವಾರ, 7 ಅಕ್ಟೋಬರ್ 2023 (16:24 IST)
Photo Courtesy: Twitter
ಹ್ಯಾಂಗ್ ಝೂ: ಏಷ್ಯನ್ ಗೇಮ್ಸ್ ನಲ್ಲಿ ಇಂದು ಭಾರತಕ್ಕೆ ಶುಭ ದಿನವಾಗಿದೆ. ಬೆಳಿಗ್ಗೆಯೇ 100 ಪದಕಗಳ ಗುರಿ ದಾಟಿದ್ದ ಭಾರತ ಇಂದು ಇತ್ತೀಚೆಗಿನ ವರದಿವರೆಗೆ 107 ಪದಕಗಳನ್ನು ಗೆದ್ದುಕೊಂಡಿದೆ.

ಪುರುಷರ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಮಳೆಯಿಂದಾಗಿ ಅಡಚಣೆಗೊಂಡ ಪಂದ್ಯದಲ್ಲಿ ಟೀಂ ಇಂಡಿಯಾ ರನ್ ರೇಟ್ ಆಧಾರದಲ್ಲಿ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ 18.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿದ್ದಾಗ ಮಳೆ ಆರಂಭವಾಯಿತು. ಬಳಿಕ ಭಾರತಕ್ಕೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ.

ಇನ್ನು, ಪುರುಷರ ಕಬಡ್ಡಿ ವಿಭಾಗದಲ್ಲಿ ರೋಚಕವಾಗಿ ನಡೆದ ಪಂದ್ಯದಲ್ಲಿ ಇರಾನ್ ವಿರುದ್ಧ ರೋಚಕ ಜಯ ಗಳಿಸಿ ಚಿನ್ನದ ಪದಕ ಗೆದ್ದುಕೊಂಡಿತು. ಪಂದ್ಯ ನಿರ್ಣಾಯಕ ಘಟ್ಟದಲ್ಲಿದ್ದಾಗ ಭಾರತದ ಪವನ್ ಶೆರಾವತ್ ಅವರ ರೈಡ್ ಗಿಳಿದಿದ್ದರು. ಈ ವೇಳೆ ಅಂಕ ನೀಡುವ ವಿಚಾರ ಗೊಂದಲವಾಗಿ ಅಂಪಾಯರ್ ಮತ್ತು ಎರಡೂ ತಂಡಗಳ ನಡುವೆ ವಾಗ್ವಾದ ಉಂಟಾದ ಪರಿಣಾಮ ಸುಮಾರು ಒಂದು ಗಂಟೆ ಕಾಲ ಪಂದ್ಯವನ್ನು ಸ್ಥಗಿತಗೊಳಿಸಬೇಕಾಗಿ ಬಂತು.

ಇದಲ್ಲದೆ, ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಈವೆಂಟ್ ನಲ್ಲಿ ಭಾರತದ ಸಾತ್ವಿಕ್-ಚಿರಾಗ್ ಜೋಡಿ ಚಿನ್ನ ಗೆದ್ದುಕೊಂಡಿದೆ. ಮಹಿಳೆಯರ ಹಾಕಿ ತಂಡ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಭಾರತದ ಖ್ಯಾತ ಕುಸ್ತಿಪಟು ದೀಪಕ್ ಪೂನಿಯಾ 86 ಕೆ.ಜಿ. ವಿಭಾಗದಲ್ಲಿ ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿ ಶತಕ ಸಿಡಿಸಿದಾಗ ಅಗ್ರೆಸಿವ್ ಆಗಿ ರೋಹಿತ್ ಶರ್ಮಾ ಹೇಳಿದ್ದೇನು: ಕೊನೆಗೂ ರಿವೀಲ್

ಗೌತಮ್ ಗಂಭೀರ್ ವಿರುದ್ಧ ಸೀನಿಯರ್ ಆಟಗಾರರು ಸಿಟ್ಟಾಗಿರುವುದಕ್ಕೆ ಕಾರಣ ಬಯಲು

ವಿರಾಟ್ ಕೊಹ್ಲಿ, ಧೋನಿ ಮೇಲೆ ಗೌತಮ್ ಗಂಭೀರ್ ಗೆ ವೈಮನಸ್ಯ ಹುಟ್ಟಿಕೊಂಡಿದ್ದು ಇದೇ ಕಾರಣಕ್ಕಾ

ಸ್ಮೃತಿ ಜತೆಗಿನ ಮದುವೆ ಮುಂದೂಡಿಕೆ ಬಳಿಕ ಮೊದಲ ಬಾರಿ ಪಲಾಶ್ ಮುಚ್ಚಲ್ ಕಾಣಿಸಿಕೊಂಡಿದ್ದು ಹೀಗೆ

Video: ಕರೆದರೂ ಕೇಳದೇ ಕೇಕ್ ಕಟಿಂಗ್ ಸೆಲೆಬ್ರೇಷನ್ ನಿಂದ ದೂರ ಹೋದ ವಿರಾಟ್ ಕೊಹ್ಲಿ

ಮುಂದಿನ ಸುದ್ದಿ
Show comments