Webdunia - Bharat's app for daily news and videos

Install App

ಡಬ್ಲ್ಯುಪಿಎಲ್‌: ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿ ಆರ್‌ಸಿಬಿ, 'ಕಪ್ ನಮ್ಮದೇ' ಎಂದಾ ಫ್ಯಾನ್ಸ್‌

Sampriya
ಭಾನುವಾರ, 17 ಮಾರ್ಚ್ 2024 (11:00 IST)
Photo Courtesy X
ನವದೆಹಲಿ:  ಐಪಿಎಲ್‌ ಪ್ರಾರಂಭವಾಗಿ 17 ವರ್ಷ ಕಳೆದರೂ ಪುರುಷರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿ ಗೆದ್ದಿಲ್ಲ. ಆದರೆ ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿರುವ ಮಹಿಳಾ ಆರ್‌ಸಿಬಿ ತಂಡವು ಕಿರೀಟ ಮುಡಿಗೇರಿಸಿಕೊಳ್ಳುವ ಹೊಸ್ತಿಲ್ಲಲಿದೆ. 
 
ಇಂದು ನವದೆಹಲಿ  ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಡಬ್ಲ್ಯುಪಿಎಲ್ ಫೈನಲ್‌ ಸಮರಕ್ಕೆ ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದು, ಆರ್‌ಸಿಬಿ ಅಭಿಮಾನಿಗಳು ಈ ಬಾರಿ 'ಕಫ್ ನಮ್ಮದೇ' ಎನ್ನುತ್ತಿದ್ದಾರೆ. 
 
ಕಳೆದ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌  ತಂಡದೊಂದಿಗೆ ಆರ್‌ಸಿಬಿ ಪ್ರಶಸ್ತಿ ಸುತ್ತಿನಲ್ಲಿ ಸೆಣೆಸಲಿದೆ. ಫ್ಲೇ ಆಫ್ ಪಂದ್ಯದಲ್ಲಿ ಬಲಿಷ್ಠ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡವನ್ನು ರೋಚಕ ಹಣಾಹಣಿಯಲ್ಲಿ ಮಣಿಸಿ ಸ್ಪೃತಿ ಮಂದಾನ ನೇತೃತ್ವದ ಆರ್‌ಸಿಬಿ ತಂಡ ಫೈನಲ್‌ಗೆ ಲಗ್ಗೆ ಹಾಕಿತ್ತು. 
 
ಪ್ರಶಸ್ತಿ ಗೆಲ್ಲುವ ತಂಡವೂ ಒಂದು ಕೋಟಿ ಮೊತ್ತ ಹಾಗೂ ಆಕರ್ಷಕ ಟ್ರೋಫಿಯನ್ನು ಹಾಗೂ ರನ್ನರ್ಸ್‌ ಆಫ್ ತಂಡವು 50 ಲಕ್ಷ ಮೊತ್ತದ ಬಹುಮಾನವನ್ನು ಪಡೆಯಲಿದೆ. 
 
ಆರ್‌ಸಿಬಿ ಫೈನಲ್ ಪ್ರವೇಶಿಸಿದ ಖುಷಿಯಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದು, ಟ್ರೋಫಿಯನ್ನು ಗೆದ್ದು ಬನ್ನಿ ಎಂದು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸುತ್ತಿದ್ದಾರೆ. 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಲವು ಮಹಿಳೆಯರೊಂದಿಗೆ ಆಫೇರ್‌, ಆರ್‌ಸಿಬಿ ಆಟಗಾರನ ವಿರುದ್ಧ ಮಹಿಳೆ ದೂರು

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮೂರು ಮಾದರಿಗಳಲ್ಲಿ ಸ್ಮೃತಿ ಮಂದಾನಾ ಶತಕ: ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ

ಮುಂದಿನ ಸುದ್ದಿ
Show comments