Webdunia - Bharat's app for daily news and videos

Install App

ವಿಶ್ವ ಗೆಲ್ಲಲು ಹೊರಟ ವಿನೇಶಳನ್ನು ಭಾರತದಲ್ಲಿಯೇ ಹೊಡೆದು ಎಳೆದಾಡಿದ್ದರು: ಬಜರಂಗ್ ಬೇಸರ

Sampriya
ಮಂಗಳವಾರ, 6 ಆಗಸ್ಟ್ 2024 (20:39 IST)
Photo Courtesy X
ನವದೆಹಲಿ: ಇಂದು ಇಡೀ ಜಗತ್ತನ್ನೇ ಗೆಲ್ಲಲು ಹೊರಟಿರುವ ಕುಸ್ತಿಪಟು ವಿನೇಶ ಪೋಗಟ್‌ರನ್ನು ಅಂದು ತನ್ನದೇ ದೇಶದಲ್ಲಿ ಬೀದಿಗಳಲ್ಲಿ ಎಳೆದು ದಮನಿಸಲಾಯಿತು ಎಂದು ಕುಸ್ತಿಪಟು ಬಜರಂಗ್ ಪೂನಿಯಾ ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ಪೋಸ್ಟ್ ವರು ಪೋಸ್ಟ್ ಮಾಡಿದ್ದಾರೆ.

'ವಿನೇಶಾ ಅವರು ನಾಲ್ಕು ಬಾರಿಯ ವಿಶ್ವ ಚಾಂಪಿಯನ್, ಒಲಿಂಪಿಕ್ಸ್ ವಿಜೇತೆ ಜಪಾನಿನ ಯುಇ ಸುಸಾಕಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಅದಾದ ಬಳಿಕ ಮಾಜಿ ವಿಶ್ವ ಚಾಂಪಿಯನ್ ಉಕ್ರೇನ್‌ನ ಸ್ಪರ್ಧಿಯ ವಿರುದ್ಧ ಜಯ ಗಳಿಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ.‌‌

'ಆದರೆ ನಿಮಗೊಂದು ವಿಷಯ ಹೇಳಲು ಬಯಸುತ್ತೇನೆ. ಅಂದು ಈ ಹುಡುಗಿಗೆ ತನ್ನದೇ ದೇಶದಲ್ಲಿ ಲಾಠಿಯಿಂದ ಹೊಡೆದು ಕ್ರೂರವಾಗಿ ನಡೆಸಿಕೊಳ್ಳಲಾಯಿತು. ಅದೇ ಹುಡುಗಿ ಇಡೀ ಜಗತ್ತನ್ನು ಗೆಲ್ಲಲು ಹೊರಟಿದ್ದಾಳೆ. ಆದರೆ ಈ ದೇಶದ ವ್ಯವಸ್ಥೆಯಲ್ಲಿ ಸೋತಿದ್ದಾಳೆ' ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಮೊದಲ ಬಾರಿಗೆ, ನಾವು ಸಂತೋಷವಾಗಿದ್ದೇವೆಯೇ ಅಥವಾ ಅಳುತ್ತೇವೆಯೇ ಎಂದು ನಮಗೆ ಅರ್ಥವಾಗುತ್ತಿಲ್ಲ. ಇಡೀ ಭಾರತವೇ ಈ ಪದಕಕ್ಕಾಗಿ ಕಾಯುತ್ತಿದೆ. ಎಲ್ಲರ ಕಣ್ಣುಗಳೂ ತೇವವಾಗಿವೆ.  ವಿನೇಶ ನೀವು ನಿಜವಾಗಿಯೂ ದಾಖಲೆಗಳನ್ನು ಮಾಡಲು ಹುಟ್ಟಿದ್ದೀರಿ. ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸಿದ ನಂತರವೂ ಗುರಿಯತ್ತ ದೃಷ್ಟಿ ನೆಟ್ಟಿದೆ. ಈ ಚಿನ್ನ ಭಾರತಕ್ಕೆ ಬರಲಿ ಎಂಬುದೇ ನಮ್ಮ ಪ್ರಾರ್ಥನೆ ಎಂದು ಬರೆದುಕೊಂಡಿದ್ದಾರೆ.




<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Asia Cup: ಓಮನ್‌ಗೆ 189 ರನ್‌ಗಳ ಗುರಿ ನೀಡಿದ ಭಾರತ

Asia Cup: ಮ್ಯಾಚ್ ರೆಫರಿ ವಿವಾದದಿಂದ ಏನೂ ಗಿಟ್ಟಲಿಲ್ಲ ಎಂದು ಈಗ ಮತ್ತೊಂದು ತಗಾದೆ ಶುರು ಮಾಡಿ ಪಾಕಿಸ್ತಾನ

ಪಾಕಿಸ್ತಾನದ ವಿರುದ್ಧ ಸೂಪರ್ 4 ಪಂದ್ಯದಲ್ಲಿ ಟೀಂ ಇಂಡಿಯಾ ಶೇಕ್ ಹ್ಯಾಂಡ್ ಮಾಡುತ್ತಾ

Asia Cup Cricket: ಟೀಂ ಇಂಡಿಯಾಕ್ಕೆ ಒಮನ್ ವಿರುದ್ಧ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯ

ಜಾವೆಲಿನ್ ಥ್ರೋ: ಇತಿಹಾಸ ನಿರ್ಮಿಸಿದ ಕ್ರೀಡಾಂಗಣದಲ್ಲಿ ನೀರಜ್ ಚೋಪ್ರಾಗೆ ನಿರಾಸೆ

ಮುಂದಿನ ಸುದ್ದಿ
Show comments