Select Your Language

Notifications

webdunia
webdunia
webdunia
webdunia

ಟೋಕಿಯೊ ಒಲಿಂಪಿಕ್ಸ್: ಹಾಲೆಂಡ್ ನ ಅಥ್ಲೀಟ್ ಗಳಿಗೆ ಕೊರೊನಾ ಪಾಸಿಟಿವ್

ಟೋಕಿಯೊ ಒಲಿಂಪಿಕ್ಸ್: ಹಾಲೆಂಡ್ ನ ಅಥ್ಲೀಟ್ ಗಳಿಗೆ ಕೊರೊನಾ ಪಾಸಿಟಿವ್
bengaluru , ಗುರುವಾರ, 22 ಜುಲೈ 2021 (16:58 IST)
ಟೋಕಿಯೊ ಒಲಿಂಪಿಕ್ಸ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಹಾಲೆಂಡ್ ನ ಒಬ್ಬ ಅಥ್ಲೀಟ್ ಹಾಗೂ ಸಹಾಯಕ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಹಾಲೆಂಡ್ ನ ಟೆಕ್ವೆಂಡೋ ತಂಡದ ರೇಷ್ಮಿ ಓಗ್ನಿಕ್ ಮತ್ತು ರೋಯಿಂಗ್ ತಂಡದ ಸಹಾಯಕ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ತಂಡ ಹೇಳಿಕೆಯಲ್ಲಿ ತಿಳಿಸಿದೆ.
ಕೊರೊನಾ ಹರಡುವಿಕೆ ತಡೆಯಲು ಗರಿಷ್ಠ ಪ್ರಯತ್ನ ಮಾಡಲಾಗುತ್ತಿದೆ. ಈ ರೀತಿಯ ಬೆಳವಣಿಗೆ ತಂಡದ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಂಡದ ಪ್ರಕಟಣೆ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರನೇ ಪಂದ್ಯದಲ್ಲಿ ದೇವದತ್ತ್ ಪಡಿಕ್ಕಲ್ ಕಣಕ್ಕೆ ಸಾಧ್ಯ ತೆ