Select Your Language

Notifications

webdunia
webdunia
webdunia
webdunia

ಅಷ್ಟಕ್ಕೂ ಪಿ ವಿ ಸಿಂಧುಗೆ ಆಗಿದ್ದಾದರೂ ಏನು? ಲಂಡನ್ ಪ್ರವಾಸದ ಹಿಂದಿದೆಯಾ ‘ರಿಟೈರ್’ ಸೀಕ್ರೆಟ್?

ಅಷ್ಟಕ್ಕೂ ಪಿ ವಿ ಸಿಂಧುಗೆ ಆಗಿದ್ದಾದರೂ ಏನು? ಲಂಡನ್ ಪ್ರವಾಸದ ಹಿಂದಿದೆಯಾ ‘ರಿಟೈರ್’ ಸೀಕ್ರೆಟ್?
ಹೈದರಾಬಾದ್ , ಮಂಗಳವಾರ, 3 ನವೆಂಬರ್ 2020 (09:16 IST)
ಹೈದರಾಬಾದ್: ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ನಿನ್ನೆ ಇದ್ದಕ್ಕಿದ್ದಂತೆ ‘ನಾನು ನಿವೃತ್ತಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಸಂಚಲನ ಮೂಡಿಸಿದ್ದರು. ಕೆಲವು ದಿನಗಳ ಹಿಂದೆ ಅವರು ದಿಡೀರ್ ಆಗಿ ಲಂಡನ್ ಗೆ ಹೋಗಿದ್ದು ಊಹಾಪೋಹಗಳನ್ನು ಹುಟ್ಟು ಹಾಕಿತ್ತು.


ಇದೆಲ್ಲದಕ್ಕೂ ಅವರ ಪ್ರಸಕ್ತ ‘ಆರೋಗ್ಯ’ ಸ್ಥಿತಿಯೇ ಕಾರಣವಿರಬಹುದೇ ಎಂದು ಈಗ ವಿಶ್ಲೇಷಿಸಲಾಗುತ್ತಿದೆ. ತಮ್ಮ ಫಿಟ್ನೆಸ್ ಗಾಗಿ ಲಂಡನ್ ಗೆ ತೆರಳುತ್ತಿರುವುದಾಗಿ ಸಿಂಧು ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಅವರ ಕುಟುಂಬ ಕಲಹ ಇದಕ್ಕೆ ಕಾರಣವಿರಬಹುದು ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಯಿತು. ಇದರ ವಿರುದ್ಧ ಸ್ವತಃ ಸಿಂಧು ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಈಗ ಐ ರಿಟೈರ್ ಎಂದು ಚಮಕ್ ಕೊಟ್ಟು, ನನ್ನ ಋಣಾತ್ಮಕ ಆಲೋಚನೆಗಳಿಂದ, ಮತ್ತು ಕೊರೋನಾ ಭಯದಿಂದ ನಿವೃತ್ತಿಯಾಗುತ್ತಿದ್ದೇನೆ, ಬ್ಯಾಡ್ಮಿಂಟನ್ ಆಟದಿಂದಲ್ಲ ಎಂದು ಚಮಕ್ ಕೊಟ್ಟಿದ್ದಾರೆ. ಜತೆಗೆ ಕೊರೋನಾ ಬಗ್ಗೆಯೂ ಜಾಗೃತಿ ಮೂಡಿಸುವ ಮಾತುಗಳನ್ನಾಡಿದ್ದಾರೆ. ಆದರೆ ಮಾನಸಿಕವಾಗಿ ಮತ್ತಷ್ಟು ಫಿಟ್ ಆಗಲು ಅವರು ಈ ದಿಡೀರ್ ಪ್ರವಾಸ ಕೈಗೊಂಡಿರುವುದು ಎನ್ನುವುದು ಈಗ ಸ್ಪಷ್ಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದಿಂದ ಶಾರುಖ್ ಖಾನ್ ಗೆ ಬರ್ತ್ ಡೇ ವಿಶ್