ನವದೆಹಲಿ: ಪ್ರತಿಷ್ಠಿತ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಭಾರತದ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಸೋತು ನಿರ್ಗಮಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಸೈನಾ ಥೈಲ್ಯಾಂಡ್ ನ ಬುಸ್ನಾನ್ ವಿರುದ್ಧ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ 10-21, 17-21 ಅಂತರದಲ್ಲಿ ಸೋಲನುಭವಿಸಿದ್ದಾರೆ. ಕೇವಲ 44 ನಿಮಿಷಗಳಲ್ಲಿ ಆಟ ಮುಕ್ತಾಯಗೊಂಡಿತು.
ಗಾಯದಿಂದ ಚೇತರಿಸಿಕೊಂಡ ಬಳಿಕ ಸೈನಾ ಫಾರ್ಮ್ ಕೊರತೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣಕ್ಕೆ ಈ ಆಟದಲ್ಲೂ ಸೈನಾ ಹೆಚ್ಚು ಪ್ರತಿರೋಧವಿಲ್ಲದೇ ಸೋಲೊಪ್ಪಿಕೊಂಡಿದ್ದಾರೆ. ಇನ್ನೀಗ ಭಾರತದ ಮಹಿಳೆಯರ ವಿಭಾಗದಲ್ಲಿ ಪಿವಿ ಸಿಂಧು ಏಕೈಕ ಭರವಸೆಯಾಗಿ ಉಳಿದಿದ್ದಾರೆ.