Select Your Language

Notifications

webdunia
webdunia
webdunia
webdunia

ಭಾರತ-ದ.ಆಫ್ರಿಕಾ ದ್ವಿತೀಯ ಟಿ20 ಪಂದ್ಯ ಇಂದು

ಭಾರತ-ದ.ಆಫ್ರಿಕಾ ದ್ವಿತೀಯ ಟಿ20 ಪಂದ್ಯ ಇಂದು
ಮೊಹಾಲಿ , ಬುಧವಾರ, 18 ಸೆಪ್ಟಂಬರ್ 2019 (09:24 IST)
ಮೊಹಾಲಿ: ಭಾರತ ಮತ್ತು ದ.ಆಫ್ರಿಕಾ ನಡುವಿನ ಟಿ20 ಸರಣಿಯ ದ್ವಿತೀಯ ಪಂದ್ಯ ಇಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯಲಿದೆ.


ಮೊದಲ ಪಂದ್ಯ ಧರ್ಮಶಾಲಾದಲ್ಲಿ ನಡೆಯಬೇಕಿತ್ತು. ಆದರೆ ಮಳೆಯ ಕಾರಣದಿಂದ ಒಂದೂ ಎಸೆತ ಕಾಣದೇ ಪಂದ್ಯ ರದ್ದಾಗಿತ್ತು. ಹೀಗಾಗಿ ಮೂರು ಪಂದ್ಯಗಳ ಸರಣಿಯನ್ನು ಗೆಲ್ಲಬೇಕಾದರೆ ಈಗ ಉಭಯ ತಂಡಗಳು ಎರಡೂ ಪಂದ್ಯಗಳನ್ನು ಗೆಲ್ಲಬೇಕಾದ ಅನಿವಾರ್ಯತೆಗೆ ಬಂದಿವೆ.

ಮೇಲ್ನೋಟಕ್ಕೆ ಟೀಂ ಇಂಡಿಯಾವೇ ಬಲಿಷ್ಠವಾಗಿದೆ. ಅತ್ತ ದ.ಆಫ್ರಿಕಾದಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿರುವುದರಿಂದ ಯುವ ಆಟಗಾರರಿಗೆ ಮಿಂಚಲು ವೇದಿಕೆಯಾಗಿದೆ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 7 ಗಂಟೆಗೆ ನಿಗದಿಯಾಗಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿವಿ ಸಿಂಧು ಮದುವೆಯಾಗಬೇಕು, ಇಲ್ಲವಾದ್ರೆ ಆಕೆಯನ್ನು ಕಿಡ್ನ್ಯಾಪ್ ಮಾಡ್ತೀನಿ ಎಂದ 70 ರ ಮುದುಕ!