Select Your Language

Notifications

webdunia
webdunia
webdunia
webdunia

ಪಿವಿ ಸಿಂಧು ಮದುವೆಯಾಗಬೇಕು, ಇಲ್ಲವಾದ್ರೆ ಆಕೆಯನ್ನು ಕಿಡ್ನ್ಯಾಪ್ ಮಾಡ್ತೀನಿ ಎಂದ 70 ರ ಮುದುಕ!

ಪಿವಿ ಸಿಂಧು ಮದುವೆಯಾಗಬೇಕು, ಇಲ್ಲವಾದ್ರೆ ಆಕೆಯನ್ನು ಕಿಡ್ನ್ಯಾಪ್ ಮಾಡ್ತೀನಿ ಎಂದ 70 ರ ಮುದುಕ!
ಹೈದರಾಬಾದ್ , ಮಂಗಳವಾರ, 17 ಸೆಪ್ಟಂಬರ್ 2019 (16:28 IST)
ಹೈದರಾಬಾದ್: ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ತಮ್ಮ ವೃತ್ತಿ ಜೀವನದಲ್ಲೇ ಬ್ಯುಸಿಯಾಗಿದ್ದು, ಮದುವೆಯ ಬಗ್ಗೆ ಇನ್ನೂ ಯೋಚನೆಯನ್ನೇ ಮಾಡಿರಲ್ಲ. ಆದರೆ ಇಲ್ಲೊಬ್ಬ 70 ರ ಮುದುಕ ನಾನು ಸಿಂಧುವನ್ನೇ ಮದುವೆಯಾಗಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾನೆ.


ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ 70 ರ ಹರೆಯದ ವ್ಯಕ್ತಿ ಮಲೈ ಸ್ವಾಮಿ ಎಂಬಾತ ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಬರೆದಿದ್ದು, ನಾನು ಸಿಂಧುವನ್ನು ಮದುವೆಯಾಗಬೇಕು. ಇಲ್ಲದೇ ಇದ್ದರೆ ಆಕೆಯನ್ನು ಅಪಹರಿಸುವುದಾಗ ಬೆದರಿಕೆಯನ್ನೂ ಹಾಕಿದ್ದಾನೆ.

ಅಷ್ಟೇ ಅಲ್ಲ 24 ವರ್ಷದ ಬ್ಯಾಡ್ಮಿಂಟನ್ ತಾರೆಯನ್ನು 16 ವರ್ಷದವಳು ಎಂದಿರುವ ವೃದ್ಧ ನನಗೆ ಆಕೆಯನ್ನು ಮದುವೆಯಾಗಲು ತಕ್ಕ ವ್ಯವಸ್ಥೆ ಮಾಡಿಕೊಡಿ. ಇಲ್ಲವಾದರೆ ನಾನೇ ಆಕೆಯನ್ನು ಅಪಹರಿಸಿ ಮದುವೆಯಾಗುವೆ ಎಂದು ಧಮಕಿ ಹಾಕಿದ್ದಾನೆ. ಮನವಿ ಪತ್ರದ ಜತೆಗೆ ಸಿಂಧು ಫೋಟೋವನ್ನೂ ಈತ ಲಗತ್ತಿಸಿದ್ದಾನೆ! ಜಿಲ್ಲಾಧಿಕಾರಿಗಳು ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಲು ಸಭೆ ಕರೆದಿದ್ದಾಗ ಈ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಸ್ಪಾಟ್ ಫಿಕ್ಸಿಂಗ್: ಪ್ರಕರಣ ಬೆಳಕಿಗೆ ಬಂದಿದ್ದು ಆ ಒಂದು ಸಾವಿನಿಂದ!