Select Your Language

Notifications

webdunia
webdunia
webdunia
webdunia

ಆಶಸ್ ಟೆಸ್ಟ್ ಡ್ರಾ: 47 ವರ್ಷಗಳ ಬಳಿಕ ಮರಳಿದ ಇತಿಹಾಸ

ಆಶಸ್ ಟೆಸ್ಟ್ ಡ್ರಾ: 47 ವರ್ಷಗಳ ಬಳಿಕ ಮರಳಿದ ಇತಿಹಾಸ
ಬೆಂಗಳೂರು , ಸೋಮವಾರ, 16 ಸೆಪ್ಟಂಬರ್ 2019 (09:42 IST)
ದಿ ಓವಲ್: ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಯಯನ್ನು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ 2-2 ಅಂತರದಿಂದ ಡ್ರಾ ಮಾಡಿಕೊಂಡಿದೆ. ಇದರೊಂದಿಗೆ 47 ವರ್ಷಗಳ ಇತಿಹಾಸ ಮರುಕಳಿಸಿದೆ.


ಐದನೇ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ 135 ರನ್ ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 2-2 ಸರಣಿ ಸಮಬಲಗೊಂಡಿತು. ಮೊದಲ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 294 ಮತ್ತು ದ್ವಿತೀಯ ಇನಿಂಗ್ಸ್ ನಲ್ಲಿ 329 ರನ್ ಗಳಿಸಿತು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 225 ಮತ್ತು 263 ರನ್ ಗಳಿಸಿತು.

ಇದರೊಂದಿಗೆ 47 ವರ್ಷಗಳ ಬಳಿಕ ಉಭಯ ತಂಡಗಳು ಆಶಸ್ ಸರಣಿ ಡ್ರಾ ಮಾಡಿಕೊಂಡ ದಾಖಲೆ ಮಾಡಿತು. ಕಳೆದ ವರ್ಷ ಆಸ್ಟ್ರೇಲಿಯಾ ಗೆದ್ದಿದ್ದರಿಂದ ಆಶಸ್ ಟ್ರೋಫಿ ಆಸ್ಟ್ರೇಲಿಯಾ ಬಳಿಯೇ ಉಳಿದುಕೊಂಡಿತು.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಯಿಂದಾಗಿ ರದ್ದಾದ ಭಾರತ-ದ.ಆಫ್ರಿಕಾ ಮೊದಲ ಟಿ20