Select Your Language

Notifications

webdunia
webdunia
webdunia
webdunia

ವಿಶ್ವಕಪ್ 2019: ದಾಖಲೆಯ ಮೂಲಕ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆದ ಇಂಗ್ಲೆಂಡ್

ವಿಶ್ವಕಪ್ 2019: ದಾಖಲೆಯ ಮೂಲಕ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆದ ಇಂಗ್ಲೆಂಡ್
ಲಾರ್ಡ್ಸ್ , ಸೋಮವಾರ, 15 ಜುಲೈ 2019 (09:13 IST)
ಲಾರ್ಡ್ಸ್: ಕ್ರಿಕೆಟ್ ಕಾಶಿ ಲಾರ್ಡ್ಸ್ ಭಾನುವಾರ ರೋಚಕ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಯಿತು. ಇದೇ ಮೊದಲ ಬಾರಿಗೆ ಕ್ರಿಕೆಟ್ ಜನಕ ಇಂಗ್ಲೆಂಡ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು.


ಎರಡೂ ಪಂದ್ಯಗಳು ಸಮಬಲದ ರನ್ ಗಳಿಸಿದ್ದರಿಂದ ಸೂಪರ್ ಓವರ್ ಮೂಲಕ ಪಂದ್ಯವನ್ನು ಇಂಗ್ಲೆಂಡ್ ಗೆದ್ದು ಚಾಂಪಿಯನ್ ಎನಿಸಿಕೊಂಡಿತು. ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಈ ರೀತಿ ಪಂದ್ಯ ಟೈ ಆಗಿ ಕೊನೆಗೆ ಸೂಪರ್ ಓವರ್ ಜಾರಿಗೆ ಬಂದಿದ್ದು ಎನ್ನುವುದು ವಿಶೇಷ.

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತು. ಈ ಸುಲಭ ಮೊತ್ತವನ್ನು ಬೆನ್ನತ್ತುವಲ್ಲಿ ಎಡವಿದ ಆಂಗ್ಲರು ಪಂದ್ಯದ ಕೊನೆಯ ಎಸೆತದಲ್ಲಿ 241 ರನ್ ಗಳಿಗೇ ಆಲೌಟ್‍ ಆಗುವ ಮೂಲಕ ಪಂದ್ಯ ಟೈ ಆಯಿತು.

ವಿಶೇಷವೆಂದರೆ ಸೂಪರ್ ಓವರ್ ನಲ್ಲೂ ಎರಡೂ ತಂಡಗಳು 15 ರನ್ ಗಳಿಸಿದವು. ಕೊನೆಗೆ ಹೆಚ್ಚು ಬೌಂಡರಿ ಭಾರಿಸಿದ ಇಂಗ್ಲೆಂಡ್ ನನ್ನು ವಿಜಯಿಯೆಂದು ಘೋಷಿಸಲಾಯಿತು. ಬಹುಶಃ ವಿಶ್ವಕಪ್ ಫೈನಲ್ ಪಂದ್ಯವನ್ನು ಈ ಮಟ್ಟಿಗಿನ ರೋಚಕತೆ ಕಾಯ್ದುಕೊಂಡಿದ್ದು ಇದೇ ಮೊದಲೇನೋ. ವಿಜೇತ ತಂಡ 27.42 ಕೋಟಿ ರೂ. ಬಹುಮಾನ ಮೊತ್ತ ಪಡೆದರೆ ರನ್ನರ್ ಅಪ್ ಆದ ನ್ಯೂಜಿಲೆಂಡ್ 13.71 ಕೋಟಿ ರೂ. ಬಹುಮಾನ ಮೊತ್ತ ಪಡೆಯಿತು. ವಿಶ್ವಕಪ್ ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ ಬೆನ್ ಸ್ಟೋಕ್ಸ್ ಪಾಲಿಗಾದರೆ, ಸರಣಿ ಶ್ರೇಷ್ಠ ಪ್ರಶಸ್ತಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಪಾಲಿಗೆ ಒಲಿಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ 2019: 12 ವರ್ಷಗಳ ದಾಖಲೆ ಮುರಿದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್