ಲಂಡನ್: ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂದು ಟೀಂ ಇಂಡಿಯಾವೇ ಫೈನಲ್ ಪಂದ್ಯ ಆಡಬಹುದು ಎಂಬುದು ನಮ್ಮ ಅಭಿಮಾನಿಗಳ ಲೆಕ್ಕಾಚಾರವಾಗಿತ್ತು.
									
										
								
																	
ಆದರೆ ದುರಾದೃಷ್ಟವಶಾತ್ ಭಾರತ ಸೆಮಿಫೈನಲ್ ನಲ್ಲೇ ಹೊರಬಿದ್ದಿದೆ. ಭಾರತ ಫೈನಲ್ ಪಂದ್ಯದಲ್ಲಿ ಆಡಬಹುದು ಎಂದು ಅಭಿಮಾನಿಗಳು ಫೈನಲ್ ಪಂದ್ಯದ ಟಿಕೆಟ್ ಖರೀದಿ ಮಾಡಿದ್ದರು. ಅದರಿಂದಾಗಿ ಈಗ ನ್ಯೂಜಿಲೆಂಡ್ ಅಭಿಮಾನಿಗಳಿಗೆ ಟಿಕೆಟ್ ಸಾಕಷ್ಟು ಸಿಗುತ್ತಿಲ್ಲ.
									
			
			 
 			
 
 			
			                     
							
							
			        							
								
																	ಇದೇ ಕಾರಣಕ್ಕೆ ನ್ಯೂಜಿಲೆಂಡ್ ಕ್ರಿಕೆಟಿಗ ಜಿಮ್ಮಿ ನೀಶಂ ಭಾರತೀಯ ಅಭಿಮಾನಿಗಳ ಬಳಿ ನಿಮ್ಮ ಬಳಿಯಿರುವ ಟಿಕೆಟ್ ಗಳನ್ನು ನಮ್ಮ ಅಭಿಮಾನಿಗಳಿಗೆ ಮಾರಾಟ ಮಾಡಿ ಎಂದು ಮನವಿ ಮಾಡಿದ್ದಾರೆ. ಟ್ವಿಟರ್ ಮೂಲಕ ಮನವಿ ಮಾಡಿರುವ ಜಿಮ್ಮಿ ನೀಶಂ ‘ಭಾರತೀಯ ಅಭಿಮಾನಿಗಳೇ ನಿಮಗೆ ಫೈನಲ್ ಪಂದ್ಯಕ್ಕೆ ಬರಲು ಮನಸ್ಸಿಲ್ಲದೇ ಹೋದರೆ ನಿಮ್ಮ ಬಳಿಯಿರುವ ಟಿಕೆಟ್ ಗಳನ್ನು ಅಧಿಕೃತ ವೇದಿಕೆ ಮೂಲಕ ಫೈನಲ್ ಗೆ ಬರಲು ಬಯಸುವ ಅಭಿಮಾನಿಗಳಿಗೆ ಮಾರಿ’ ಎಂದು ಮನವಿ ಮಾಡಿದ್ದಾರೆ.