Select Your Language

Notifications

webdunia
webdunia
webdunia
webdunia

Paris Olmypics: ಶೂಟಿಂಗ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಇಲ್ಲಿದೆ ವಿವರ

Manu Bhaker

Krishnaveni K

ಪ್ಯಾರಿಸ್ , ಮಂಗಳವಾರ, 30 ಜುಲೈ 2024 (13:58 IST)
Photo Credit: Facebook
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಪದಕ ದಕ್ಕಿದೆ. ಮೊನ್ನೆಯಷ್ಟೇ ಕಂಚಿನ ಪದಕ ಗೆದ್ದು ಕೀರ್ತಿ ತಂದಿದ್ದ ಮನು ಭಾಕರ್ ಇಂದು ಮಿಶ್ರ ಈವೆಂಟ್ ನಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಮತ್ತೊಂದು ಪದಕ ಗೆದ್ದಿದ್ದಾರೆ.

10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಮನು ಭಾಕರ್ ಮತ್ತು ಸರಬ್ಜೋತ್ ಜೋಡಿ ಮೂರನೇ ಸ್ಥಾನಿಯಾಗಿ ಕಂಚಿನ ಪದಕ ಗೆದ್ದುಕೊಂಡಿದೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಎರಡನೇ ಪದಕ ಗೆದ್ದುಕೊಂಡಂತಾಗಿದೆ. ಅದೂ ಶೂಟಿಂಗ್ ವಿಭಾಗದಲ್ಲಿಯೇ ಎರಡೂ ಪದಕಗಳು ಬಂದಿರುವುದು ವಿಶೇಷ.

ಈ ಜೋಡಿ ನಿನ್ನೆ ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಗಳಿಸಿ ಕಂಚಿನ ಪದಕಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಇಂದು ಕೊರಿಯನ್ ಜೋಡಿಯನ್ನು ಸೋಲಿಸಿದ ಭಾರತೀಯ ಜೋಡಿ ಕಂಚಿನ ಪದಕಕ್ಕೆ ಕೊರಳೊಡ್ಡಿದೆ. ಮನು ಭಾಕರ್ ಗೆ ಒಂದೇ ಒಲಿಂಪಿಕ್ಸ್ ನಲ್ಲಿ ಇದು ಎರಡನೇ ಪದಕ ಎನ್ನುವುದು ವಿಶೇಷವಾಗಿದೆ.

ಇದಕ್ಕೆ ಮೊದಲು ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಮಿಶ್ರ ಈವೆಂಟ್ ನಲ್ಲಿ ಕೊರಿಯಾ ಜೋಡಿಯಿಂದ ಮನು ಭಾಕರ್-ಸರಬ್ಜೋತ್ ತೀವ್ರ ಪೈಪೋಟಿ ಎದುರಿಸಿದ್ದರು. ಅಂತಿಮವಾಗಿ ಭಾರತೀಯ ಜೋಡಿಗೆ ಗೆಲುವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಮುಗಿಸಿ ಭಾರತಕ್ಕೆ ಬರುತ್ತಿದ್ದಾಗ ವಿಮಾನದಲ್ಲೇ ರಾಹುಲ್ ದ್ರಾವಿಡ್ ಗೆ ಬೈದಿದ್ದರಂತೆ ರೋಹಿತ್ ಶರ್ಮಾ