Select Your Language

Notifications

webdunia
webdunia
webdunia
webdunia

ಪ್ಯಾರಿಸ್ ಒಲಿಂಪಿಕ್: ಚಿನ್ನದ ಪದಕದತ್ತ ಪಿವಿ ಸಿಂಧು ಮೊದಲ ಹೆಜ್ಜೆ

ಪ್ಯಾರಿಸ್ ಒಲಿಂಪಿಕ್: ಚಿನ್ನದ ಪದಕದತ್ತ  ಪಿವಿ ಸಿಂಧು ಮೊದಲ ಹೆಜ್ಜೆ

Sampriya

ಪ್ಯಾರಿಸ್‌ , ಸೋಮವಾರ, 29 ಜುಲೈ 2024 (08:31 IST)
Photo Courtesy X
ಪ್ಯಾರಿಸ್‌: ಇಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾನುವಾರ ಮನು ಭಾಕರ್ ಕಂಚಿಕ ಪದಕವನ್ನು ಪಡೆಯುವುದರೊದಿಗೆ ಭಾರತ ತನ್ನ ಪದಕದ ಖಾತೆಯನ್ನು ತೆರೆದಿದೆ.

ಈ ಮೂಲಕ ಭಾರತೀಯ ಕ್ರೀಡಾಳುಗಳು ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಇದೀಗ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಚಿನ್ನದ ಭೇಟೆಗೆ ಮೊದಲ ಹೆಜ್ಜೆಯಿಟ್ಟಿದ್ದಾರೆ.

ಮಾಲ್ಡೀವ್ಸ್​ನ ಫಾತಿಮಾ ನಬ್ಹಾ ಅಬ್ದುಲ್ ರಜಾಕ್ ವಿರುದ್ಧ ನಡೆದ ಪಂದ್ಯಾಟದಲ್ಲಿ ಫಾತಿಮಾರನ್ನು ಪಿವಿ ಸಿಂಧು ಮಣಿಸಿದ್ದಾರೆ. ಕೇವಲ 29 ನಿಮಿಷಗಳಲ್ಲಿ ಫಾತಿಮಾ ವಿರುದ್ಧ ಸುಲಭ ಗೆಲುವು ಸಾಧಿಸಿ ಗೆಲುವಿನತ್ತ ಹೆಜ್ಜೆಯಿಟ್ಟಿದ್ದಾರೆ.

ಎರಡು ಸುತ್ತಿನ ಆಟದಲ್ಲಿ 21-9, 21-6 ಪಾಯಿಂಟ್ಸ್​ ಅಂತರದಲ್ಲಿ ಫಾತಿಮಾ ವಿರುದ್ಧ ಗೆಲುವು ದಾಖಲಿಸಿಕೊಳ್ಳುವುದರ ಮೂಲಕ ಸಿಂಧು ಶುಭಾರಂಭ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾ ವಿರುದ್ಧ ಎರಡನೇ ಪಂದ್ಯದಲ್ಲೂ ಭಾರತಕ್ಕೆ ಭರ್ಜರಿ ಜಯ, ಸರಣಿ ಕೈವಶ