ಮಹಿಳಾ ಕ್ರಿಕೆಟ್ ನ ಸಚಿನ್ ತೆಂಡೂಲ್ಕರ್ ಎಂದೇ ಖ್ಯಾತರಾಗಿದ್ದ ಭಾರತ ತಂಡದ ಮಾಜಿ ನಾಯಕ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.
ಮೂರೂ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳುವ ಮೂಲಕ ಮಿಥಾಲಿ ರಾಜ್, ಎರಡು ದಶಕಗಳ ಕಾಲದ ಕ್ರಿಕೆಟ್ ಬದುಕಿಗೆ ಅಂತ್ಯ ಹಾಡಿದರು.
೨೩೨ ಏಕದಿನ ಪಂದ್ಯಗಳಲ್ಲಿ ೭೮೦೫ ರನ್ ಗಳಿಸಿರುವ ಮಿಥಾಲಿ ರಾಜ್, ೧೨ ಟೆಸ್ಟ್ ಹಾಗೂ ೮೯ ಟಿ-೨೦ ಪಂದ್ಯಗಳನ್ನು ಆಡಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಟಿ-20 ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ೩೯ ವರ್ಷದ ಮಿಥಾಲಿ ರಾಜ್, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿದಾಯ ಘೋಷಿಸಿದ್ದು, ಬಿಸಿಸಿಐಗೆ ಕಳುಹಿಸಿರುವ ಪತ್ರವನ್ನು ಪ್ರಕಟಿಸಿದ್ದಾರೆ.