ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪಿವಿ ಸಿಂಧುಗೆ ಸಾಥ್ ನೀಡುತ್ತಿರುವ ಮೆಗಾಸ್ಟಾರ್ ಚಿರಂಜೀವಿ ಫ್ಯಾಮಿಲಿ ಏನೆಲ್ಲಾ ಮಾಡ್ತಿದೆ ನೋಡಿ

Krishnaveni K
ಮಂಗಳವಾರ, 30 ಜುಲೈ 2024 (10:50 IST)
Photo Credit: Instagram
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಸ್ಪರ್ಧಿಸುತ್ತಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ಮೆಗಾಸ್ಟಾರ್ ಚಿರಂಜೀವಿ ಫ್ಯಾಮಿಲಿ ಸಮೇತ ಜೊತೆಯಾಗಿ ನಿಂತು ಸಪೋರ್ಟ್ ಮಾಡುತ್ತಿದ್ದಾರೆ.

ಪಿವಿ ಸಿಂಧು ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರು. ಈ ಪಂದ್ಯದ ವೇಳೆ ಚಿರಂಜೀವಿ, ಅವರ ಪತ್ನಿ, ಪುತ್ರ ರಾಮ್ ಚರಣ್, ಸೊಸೆ ಉಪಾಸನಾ, ಮೊಮ್ಮಗಳು ಕ್ಲಿನ್ ಕ್ಲಾರಾ ಮತ್ತು ಅವರ ಮುದ್ದಿನ ನಾಯಿ ಕೂಡಾ ಮೈದಾನದಲ್ಲಿ ಪಂದ್ಯ ವೀಕ್ಷಿಸಿದೆ. ಸಿಂಧು ಹೆಸರೆತ್ತಿ ಜೋರಾಗಿ ಚಿಯರ್ ಅಪ್ ಮಾಡಿದ್ದಾರೆ.

ಇದು ಇಷ್ಟಕ್ಕೇ ನಿಂತಿಲ್ಲ. ಒಲಿಂಪಿಕ್ಸ್ ಗ್ರಾಮದಲ್ಲಿ ಸಿಂಧು ಜೊತೆಗೇ ಕುಟುಂಬ ಸದಸ್ಯರಂತೆ ಚಿರಂಜೀವಿ ಕುಟುಂಬ ಜೊತೆಗೇ ಇದ್ದು ಆತ್ಮೀಯವಾಗಿ ಕಾಲ ಕಳೆದಿದ್ದಾರೆ. ಇದು ಕೇವಲ ಸಿಂಧುಗೆ ಮಾತ್ರವಲ್ಲ, ಭಾರತದ ಇತರೆ ಕ್ರೀಡಾಪಟುಗಳ ಬಗ್ಗೆಯೂ ಚಿರಂಜೀವಿ ಫ್ಯಾಮಿಲಿ ಕಾಳಜಿ ವಹಿಸುತ್ತಿದ್ದಾರೆ.

ದಕ್ಷಿಣ ಭಾರತದಿಂದ ತೆರಳಿರುವ ಸ್ಪರ್ಧಿಗಳು ಪ್ಯಾರಿಸ್ ನಲ್ಲಿ ತಮ್ಮ ಮೆಚ್ಚಿನ ರಸಂ, ಉಪ್ಪಿನಕಾಯಿ ಇತ್ಯಾದಿ ಆಹಾರ ವಸ್ತುಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಇದ್ಯಾವುದೂ ಕಾಡದಂತೆ ಉಪ್ಪಿನಕಾಯಿ, ರಸಂ ಮಿಕ್ಸ್, ಪುಳಿಯೋಗರೆ ಮಿಕ್ಸ್ ನೀಡಿ ಕ್ರೀಡಾಳುಗಳಿಗೆ ಸಹಾಯ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಲಂಡನ್ ನಲ್ಲಿದ್ದ ಚಿರಂಜೀವಿ ಫ್ಯಾಮಿಲಿ ಈಗ ಒಲಿಂಪಿಕ್ಸ್ ಪಂದ್ಯಾವಳಿಗಳನ್ನು ವೀಕ್ಷಿಸಲು ಪ್ಯಾರಿಸ್ ನಲ್ಲಿ ಬೀಡುಬಿಟ್ಟಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾಗೆ ಮರಳಿದ ಕಿಂಗ್‌ ಕೊಹ್ಲಿ, ಸಹ ಆಟಗಾರರ ಜತೆಗಿನ ವಿರಾಟ್ ಕ್ಷಣ ನೋಡುವುದೇ ಖುಷಿ

ಕೊಹ್ಲಿಯಿಂದ ಬ್ಯಾಟಿಂಗ್ ಟಿಪ್ಸ್, ರೋಹಿತ್ ರಿಂದ ಕ್ಯಾಪ್ಟನ್ಸಿ ಟಿಪ್ಸ್: ಶುಭಮನ್ ಗಿಲ್ ಬಲು ಜಾಣ

ಫಿಟ್ ಇದ್ರೆ ನಂಗೆ ಹೇಳ್ಬೇಕಿತ್ತು, ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ತಿರುಗೇಟು

ಯಾವ ದಿನ ನಿವೃತ್ತಿಯಾಗುತ್ತೇನೆಂದು ಅಂದೇ ಹೇಳಿದ್ದರು ವಿರಾಟ್ ಕೊಹ್ಲಿ

Video: ವಿರಾಟ್ ಕೊಹ್ಲಿ ಅಟೋಗ್ರಾಫ್ ಕೊಟ್ಟಿದ್ದಕ್ಕೆ ಈ ಹುಡುಗ ಹಿಂಗೆಲ್ಲಾ ಮಾಡೋದಾ

ಮುಂದಿನ ಸುದ್ದಿ
Show comments