Webdunia - Bharat's app for daily news and videos

Install App

ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲಿ ಕಾಣಿಸಿಕೊಂಡ ಮಹೇಂದ್ರ ಸಿಂಗ್‌ ಧೋನಿ: ಇದು ಐಪಿಎಲ್‌ಗೆ ಸಿದ್ಧತೆ ಎಂದ ಫ್ಯಾನ್ಸ್‌

Sampriya
ಶನಿವಾರ, 24 ಆಗಸ್ಟ್ 2024 (19:10 IST)
Photo Courtesy X
ಚೆನ್ನೈ: ಕ್ಯಾಪ್ಟನ್‌ ಕೂಲ್‌ ಮಹೇಂದ್ರ ಸಿಂಗ್‌ ಧೋನಿ ಮುಂದಿನ ಐಪಿಎಲ್‌ ಟೂರ್ನಿ ಆಡುತ್ತಾರೆಯೇ ಎಂಬ ಪ್ರಶ್ನೆಯ ಮಧ್ಯೆ ಅವರು ತಾಲೀಮು ಆರಂಭಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿಯಾಗಿದ್ದು, ಇದು ಮುಂದಿನ ಐಪಿಎಲ್‌ಗೆ ಭರ್ಜರಿ ಸಿದ್ಧತೆ ಎಂಬ ಲೆಕ್ಕಾಚಾರ ಹೊಂದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕರಾಗಿದ್ದ ಧೋನಿ ಐಪಿಎಲ್‌ನ ಕಳೆದ ಆವೃತ್ತಿಗೆ ಮೊದಲು ಋತುರಾಜ್‌ ಗಾಯಕವಾಡ್ ಅವರಿಗೆ ನಾಯಕತ್ವವನ್ನು ಹಸ್ತಾಂತರಮಾಡಿ ಅಚ್ಚರಿ ಮೂಡಿಸಿದ್ದರು. ಈ ಬೆಳವಣಿಗೆ ಮಧ್ಯೆ 43 ವರ್ಷದ ಧೋನಿ ಕ್ರಿಕೆಟ್‌ಗೆ ವಿದಾಯ ಹೇಳುತ್ತಾರೆ ಎನ್ನಲಾಗಿತ್ತು. ಆದರೆ, ಟೂರ್ನಿಯಲ್ಲಿ ಅವರು ಚೆನ್ನೈ ತಂಡದ ಪರ ಮಿಂಚಿದ್ದು ಮಾತ್ರವಲ್ಲದೆ ಕ್ರಿಕೆಟ್‌ಗೆ ತಾನಿನ್ನೂ ಸಮರ್ಥನಿದ್ದೇನೆ ಎಂಬ ಸಂದೇಶ ರವಾನಿಸಿದ್ದರು.

ಮುಂದಿನ ಐಪಿಎಲ್‌ ಟೂರ್ನಿಯನ್ನು ಧೋನಿ ಆಡುತ್ತಾರೆಯೇ ಎಂಬ ಪ್ರಶ್ನೆ ಈಗ ಎದ್ದಿದೆ. ಅದರ ನಡುವೆ ಧೋನಿ ಐಪಿಎಲ್​ಗಾಗಿ ಸಿದ್ದತೆಗಳನ್ನು ಶುರು ಮಾಡಿದ್ದಾರೆ. ಇದಕ್ಕಾಗಿ ಈ ಬಾರಿ ಬ್ಯಾಡ್ಮಿಂಟನ್​ ಮೊರೆ ಹೋಗಿದ್ದಾರೆ. ಬಿಡುವಿನಲ್ಲಿರುವ ಧೋನಿ ಬ್ಯಾಡ್ಮಿಂಟನ್​ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಫಿಟ್​ನೆಸ್ ಸಾಧಿಸುವ ಇರಾದೆಯಲ್ಲಿರುವ ಧೋನಿ ಬ್ಯಾಡ್ಮಿಂಟನ್ ಆಡಲಾರಂಭಿಸಿದ್ದಾರೆ ಎನ್ನಲಾಗುತ್ತಿದೆ

ಈ ಹಿಂದೆ ಕೊರೋನಾ ಲಾಕ್​ಡೌನ್ ವೇಳೆಯೂ ಧೋನಿ ತಮ್ಮ ಫಿಟ್​ನೆಸ್​ ಅನ್ನು ಕಾಪಾಡಿಕೊಳ್ಳಲು ಪ್ರತಿದಿನ ಬ್ಯಾಡ್ಮಿಂಟನ್​ ಆಡುತ್ತಿದ್ದರು. ಇದೀಗ ಮತ್ತೆ ಬ್ಯಾಡ್ಮಿಂಟನ್​ ಅಂಗಳದಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಇದರೊಂದಿಗೆ ಧೋನಿ ಈ ಬಾರಿಯ ಐಪಿಎಲ್ ಆಡುವುದು ಕೂಡ ಖಚಿತವಾಗಿದೆ. ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಮಹೇಂದ್ರ ಸಿಂಗ್ ಧೋನಿಯನ್ನು ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಸಿಎಸ್​ಕೆ ರಿಟೈನ್ ಮಾಡಿಕೊಳ್ಳುವ ಸಾಧ್ಯತೆಯಿದೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕಣ್ಣು ಕುಕ್ಕಿದ ಇಂಗ್ಲೆಂಡ್ ಪ್ರೇಕ್ಷಕನ ಕೆಂಪು ಟೀ ಶರ್ಟ್‌, ಕ್ರೀಸ್‌ನಲ್ಲಿದ್ದ ಜಡೇಜಾ ಮಾಡಿದ್ದೇನು ಗೊತ್ತಾ

ಕೆಣಕಿದ ಕ್ರಾಲಿಗೆ ತಕ್ಕ ಉತ್ತರ ನೀಡಿದ ಮೊಹಮ್ಮದ್‌ ಸಿರಾಜ್‌: ಕುತೂಹಲಕರ ಘಟ್ಟದತ್ತ ಐದನೇ ಟೆಸ್ಟ್‌

ತಪ್ಪನ್ನು ಸರಿಪಡಿಸಿಕೊಂಡು ಮತ್ತೆ ಆಖಾಢಕ್ಕೆ ಸಿದ್ಧವಾಗುತ್ತೇವೆ ಎಂದ ಮಹೇಂದ್ರ ಸಿಂಗ್ ಧೋನಿ

ವಿಚ್ಚೇದನದಿಂದ ಹಿಂದೆ ಸರಿದ ಸೈನಾ ನೆಹ್ವಾಲ್‌: ದೂರವಾದಾಗಲೇ ಬೆಲೆ ತಿಳಿಯೋದು ಎಂದ ಬ್ಯಾಡ್ಮಿಂಟನ್‌ ತಾರೆ

END vs IND Test: ನೈಟ್ ವಾಚ್ಮೆನ್ ಆಗಿ ಬಂದು ಮೊದಲ ಅರ್ಧ ಶತಕ ಸಿಡಿಸಿದ ಆಕಾಶದೀಪ್‌

ಮುಂದಿನ ಸುದ್ದಿ
Show comments