Select Your Language

Notifications

webdunia
webdunia
webdunia
webdunia

ಐಪಿಎಲ್‌ನ ಯಶಸ್ಸಿನ ಶ್ರೇಯವನ್ನು ಪತ್ನಿ ಅಲಿಸ್ಸಾ ಹೀಲಿಗೆ ಅರ್ಪಿಸಿದ ಮಿಚೆಲ್‌ ಸ್ಟಾರ್ಕ್‌

Mitchell Starc

Sampriya

ಚೆನ್ನೈ , ಸೋಮವಾರ, 27 ಮೇ 2024 (15:18 IST)
Photo Courtesy X
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ 17 ಆವೃತ್ತಿಯಲ್ಲಿ ದಾಖಲೆಯ ಮೊತ್ತಕ್ಕೆ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಪಾಲಾಗಿ, ಇದೀಗ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ ಆಸ್ಟ್ರೇಲಿಯಾದ ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್‌ ಅವರು ಯಶಸ್ಸಿಯ ಶ್ರೇಯಸನ್ನು ಪತ್ನಿ ಅಲಿಸ್ಸಾ ಹೀಲಿ ಅವರಿಗೆ ಅರ್ಪಿಸಿದ್ದಾರೆ. ವಿಶೇಷ ಎಂದರೆ ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ ಆಗಿದ್ದಾರೆ.

ಐಪಿಎಲ್‌ಗೆ ಪುನರಾಗಮನ ಮಾಡಲು ಸಹಾಯ ಮಾಡಿದ ಅಲಿಸ್ಸಾ ಹೀಲಿ ಅವರನ್ನು ಮಿಚೆಲ್ ಸ್ಟಾರ್ಕ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.  ಎಡಗೈ ವೇಗದ ಬೌಲರ್ ಸ್ಟಾರ್‌ ಅವರನ್ನು ₹ 24.75 ಕೋಟಿ ಕೆಕೆಆರ್‌ ತಂಡವು ತನ್ನ ತೆಕ್ಕೆಗೆ ಹಾಕಿಕೊಂಡಿತು. ಇದು ಐಪಿಎಲ್‌ ಇತಿಹಾಸದಲ್ಲಿ ಆಟಗಾರನಿದೆ ಸಿಕ್ಕಿದ ಅತ್ಯಂತ ದುಬಾರಿ ಮೊತ್ತವಾಗಿದೆ.

ಹೀಗಿದ್ದರೂ ಅವರು ತಮ್ಮ ಮೊದಲ 2 ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯದೆ 12.50 ಎಕಾನಮಿ ದರದಲ್ಲಿ 100 ರನ್​ಗಳನ್ನು ಸೋರಿಕೆ ಮಾಡಿದ ನಂತರ ಅವರು ತಮ್ಮ ಕಷ್ಟದ ಸಮಯವನ್ನು ಎದುರಿಸದಿರು. ಆದರೆ, ಲೀಗ್ ಹಂತದ ಕೊನೆಯ ಹಂತದಲ್ಲಿ ಫಾರ್ಮ್​ ಕಂಡುಕೊಳ್ಳುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದರು.

ಸ್ಟಾರ್ಕ್ ಅವರ ಪತ್ನಿ ಆಸ್ಟ್ರೇಲಿಯಾ ಮಹಿಳೆಯರ ತಂಡದ ವಿಕೆಟ್​ ಕೀಪರ್ ಮತ್ತು ಬ್ಯಾಟರ್​ ಅಲಿಸ್ಸಾ ಹೀಲಿ ಕೂಡ ಪಂದ್ಯಗಳ ಸಮಯದಲ್ಲಿ ತಮ್ಮ ಪತಿಯನ್ನು ಹುರಿದುಂಬಿಸಲು ಆಗಮಿಸಿದ್ದರು. ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಕೆಕೆಆರ್ ಪಂದ್ಯದ ವೇಳೆ ಮೊದಲ ಬಾರಿಗೆ ಕಾಣಿಸಿಕೊಂಡರು. ಅಂದಿನಿಂದ ಸ್ಟಾರ್ಕ್ ಹಿಂತಿರುಗಿ ನೋಡಿಲ್ಲ. ಹೀಲಿಯ ಉಪಸ್ಥಿತಿಯು ತನ್ನ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಸ್ಟಾರ್ಕ್ ಹೇಳಿದರು.

ಪ್ಲೇಆಫ್ ಮತ್ತು ಫೈನಲ್​ನಲ್ಲಿ ಸ್ಟಾರ್ಕ್ ತಮ್ಮನ್ನು ತಾವು ಅತ್ಯುತ್ತಮ ಆಟಗಾರ ಎಂಬುದನ್ನು ಸಾಬೀತು ಮಾಡಿದರು. ಅಹಮದಾಬಾದ್‌ನಲ್ಲಿ ನಡೆದ ಮೊದಲ ಕ್ವಾಲಿಫೈಯರ್‌ನಲ್ಲೂ ಸ್ಟಾರ್ಕ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ಆ ಪಂದ್ಯದಲ್ಲಿ 3 ವಿಕೆಟ್​ ಪಡೆದುಕೊಂಡಿದ್ದರು. ಫೈನಲ್​ನಲ್ಲೂ ಅವರು ಮಿಂಚಿದ್ದರು. 14 ರನ್‌ಗೆ ಎರಡು ಪ್ರಮುಖ ವಿಕೆಟ್‌ ಪಡೆದೂ ಮತ್ತೆ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಆರ್ ಸಿಬಿ ಅಭಿಮಾನಿಗಳ ಕೆಣಕಿದ ಅಂಬಟಿ ರಾಯುಡು, ಆರೆಂಜ್ ಕ್ಯಾಪ್ ಗೆದ್ದ ಕೊಹ್ಲಿಗೆ ವ್ಯಂಗ್ಯ