Select Your Language

Notifications

webdunia
webdunia
webdunia
webdunia

ರೋಹಿತ್‌ಗೆ ಕೊರೊನಾ ಪಾಸಿಟಿವ್:‌ ಇಂಗ್ಲೆಂಡ್‌ ಟೆಸ್ಟ್‌ ಗೆ ಮಯಾಂಕ್‌ ಗೆ ಬುಲಾವ್!

England Mayank Agarwal Rohit Sharma ರೋಹಿತ್‌ ಶರ್ಮ ಕೊರೊನಾ ಪಾಸಿಟಿವ್ ಮಯಾಂಕ್‌ ಅಗರ್‌ ವಾಲ್
bengaluru , ಸೋಮವಾರ, 27 ಜೂನ್ 2022 (14:19 IST)
ಭಾರತ ತಂಡದ ನಾಯಕ ರೋಹಿತ್‌ ಶರ್ಮ ಕೊರೊನಾ ಪಾಸಿಟಿವ್‌ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಕರ್ನಾಟಕದ ಆರಂಭಿಕ ಮಯಾಂಕ್‌ ಅಗರ್‌ ವಾಲ್‌ ಅವರನ್ನು ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಆಮಂತ್ರಿಸಲಾಗಿದೆ.
ರೋಹಿತ್‌ ಶರ್ಮ ಆರಂಭಿಕನಾಗಿ ಕಣಕ್ಕಿಳಿಯಬೇಕಿತ್ತು. ಆದರೆ ಕೊರೊನಾ ಪಾಸಿಟಿವ್‌ ಹಿನ್ನೆಲೆಯಲ್ಲಿ ಅವರ ಸ್ಥಾನ ತುಂಬಲು ಮಯಾಂಕ್‌ ಅಗರ್‌ ವಾಲ್‌ ಅವರನ್ನು ಬಿಸಿಸಿಐ ಆಯ್ಕೆ ಮಾಡಲಾಗಿದ್ದು, ಇಂಗ್ಲೆಂಡ್‌ ವಿಮಾನ ಹತ್ತಿದ್ದಾರೆ.
ಜುಲೈ 1ರಂದು ಇಂಗ್ಲೆಂಡ್‌ ಮತ್ತು ಭಾರತ ತಂಡಗಳ ನಡುವಣ ಬಾಕಿ ಇದ್ದ ಏಕೈಕ ಟೆಸ್ಟ್‌ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಯಾಂಕ್‌ ಜೂನ್‌ 27ರಂದು ಇಂಗ್ಲೆಂಡ್‌ ಗೆ ಪ್ರಯಾಣ ಬೆಳೆಸಿದ್ದಾರೆ.
ಮಯಾಂಕ್‌ ಅಗರ್‌ ವಾಲ್‌ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಹಂಚಿಕೊಂಡಿದ್ದು, ಇಂಗ್ಲೆಂಡ್‌ ನಲ್ಲಿ ನಡೆಯಲಿರುವ ಏಕೈಕ ಟೆಸ್ಟ್‌ ಪಂದ್ಯಕ್ಕಾಗಿ ನಾನು ಪ್ರಯಾಣ ಆರಂಭಿಸಿದ್ದೇನೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಯಾಂಕ್ ಅಗರ್ವಾಲ್ ಗೆ ಟೀಂ ಇಂಡಿಯಾ ಕರೆ