Webdunia - Bharat's app for daily news and videos

Install App

ನಾಳೆ ಭಾರತ-ದ.ಆಫ್ರಿಕಾ ಟಿ-20: ವಿಶ್ವದಾಖಲೆ ಮೇಲೆ ಭಾರತ ಕಣ್ಣು

Webdunia
ಬುಧವಾರ, 8 ಜೂನ್ 2022 (18:15 IST)
ಕರ್ನಾಟಕದ ಮಾಜಿ ಕಲಾತ್ಮಕ ಆಟಗಾರ ಹಾಗೂ ಕೋಚ್‌ ಆಗಿರುವ ರಾಹುಲ್‌ ದ್ರಾವಿಡ್‌ ಮತ್ತು ಅವರದ್ದೇ ಸ್ಫೂರ್ತಿಯಿಂದ ಕ್ರಿಕೆಟ್‌ ಲೋಕದಲ್ಲಿ ಅವರದ್ದೇ ಹೆಜ್ಜೆ ಗುರುತಿನಲ್ಲಿ ಸಾಗುತ್ತಿರುವ ಕರ್ನಾಟಕದ ಸ್ಟಾರ್‌ ಬ್ಯಾಟ್ಸ್‌ ಮನ್‌ ಕೆಎಲ್‌ ರಾಹುಲ್‌… ಈ ಇಬ್ಬರು ರಾಹುಲ್‌ ಗಳ ಚುಕ್ಕಾಣಿಯಲ್ಲಿ ಮೊದಲ ಬಾರಿ ಭಾರತ ತಂಡ ಹರಿಣಗಳನ್ನು ಬೇಟೆಯಾಡಲು ಸಜ್ಜಾಗಿದೆ.
ನಾಯಕ ರೋಹಿತ್‌ ಶರ್ಮ ಮತ್ತು ಮಾಜಿ ನಾಯಕ ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಭಾರತ ತಂಡ ಗುರುವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಶುಭಾರಂಭ ಮಾಡುವ ಗುರಿ ಹೊಂದಿದೆ.
ಪ್ರಮುಖ ಆಟಗಾರರ ಅನುಪಸ್ಥಿತಿ ನಡುವೆ ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಕೆಎಲ್‌ ರಾಹುಲ್‌ ಮತ್ತು ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ವಿಶ್ವದಾಖಲೆಗಿಂತ ಮುಂಬರುವ ಟಿ-೨೦ ವಿಶ್ವಕಪ್‌ ಟೂರ್ನಿಗೆ ತಂಡವನ್ನು ಸಂಯೋಜಿಸುವತ್ತ ಗಮನ ಹರಿಸಲಿದ್ದಾರೆ.
ಭಾರತ ತಂಡ ಸತತ 12 ಟಿ-20 ಪಂದ್ಯಗಳನ್ನು ಗೆದ್ದು ಅತೀ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ಆಫ್ಘಾನಿಸ್ತಾನ ತಂಡದ ಜೊತೆ ಅಗ್ರಸ್ಥಾನ ಹಂಚಿಕೊಂಡಿದೆ. ನಾಳಿನ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಭಾರತ ಅತೀ ಹೆಚ್ಚು ಸತತ ಟಿ-20 ಪಂದ್ಯಗಳನ್ನು ಗೆದ್ದ ವಿಶ್ವದಾಖಲೆ ಬರೆಯಲಿದೆ.
ಹಾರ್ದಿಕ್‌ ಪಟೇಲ್‌ ಮರಳಿರುವುದರಿಂದ ಅವರನ್ನು ಆಲ್‌ ರೌಂಡರ್‌ ಮತ್ತು ಫಿನಿಷರ್‌ ಪಾತ್ರದಲ್ಲಿ ಬಳಸಿಕೊಳ್ಳಲು ಚಿಂತನೆ ನಡೆದಿದೆ. ಮತ್ತೊಂದೆಡೆ ಐಪಿಎಲ್‌ ನಲ್ಲಿ ಮಿಂಚಿದ ದಿನೇಶ್‌ ಕಾರ್ತಿಕ್‌ ಮತ್ತು ರಿಷಭ್‌ ಪಂತ್‌ ಇಬ್ಬರಲ್ಲಿ ಯಾರನ್ನು ಆಡಿಸುವುದು, ಯಾವ ಕ್ರಮಾಂಕದಲ್ಲಿ ಆಡಿಸುವುದು ಎಂಬ ಬಗ್ಗೆ ಇಬ್ಬರು ರಾಹುಲ್‌ ಪಂದ್ಯದ ಕೊನೆಯಲ್ಲಿ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಕೆಎಲ್‌ ರಾಹುಲ್‌ ಭರ್ಜರಿ ಫಾರ್ಮ್‌ ನಲ್ಲಿದ್ದು, ಐಪಿಎಲ್‌ ನಲ್ಲಿ ರನ್‌ ಹೊಳೆ ಹರಿಸಿದ್ದರು. ಇದೇ ಫಾರ್ಮ್‌ ಅನ್ನು ದಕ್ಷಿಣ ಆಫ್ರಿಕಾ ವಿರುದ್ಧವೂ ಮುಂದುವರಿಸುವ ವಿ‍ಶ್ವಾಸದಲ್ಲಿದ್ದಾರೆ. ಭಾರತ ತಂಡದ ಬ್ಯಾಟಿಂಗ್‌ ಬಲಿಷ್ಠವಾಗಿದ್ದು, ಬೌಲಿಂಗ್‌ ಬಗ್ಗೆ ವಿಶ್ವಾಸವಿದ್ದರೂ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ ಮನ್‌ ಗಳು ಭಾರತದ ನೆಲದಲ್ಲಿ ಆಡಿದ ಅನುಭವ ಹೊಂದಿರುವುದರಿಂದ ಈ ಸರಣಿ ಕುತೂಹಲ ಮೂಡಿಸಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಿಸಿಸಿಐ ಮುಂದೆ ಥಂಡಾ ಹೊಡೆದು ಏಷ್ಯಾ ಕಪ್ ಟ್ರೋಫಿ ವಾಪಸ್ ಮಾಡಿದ ಮೊಹ್ಸಿನ್ ನಖ್ವಿ

T20 ಕ್ರಿಕೆಟ್‌ ಬ್ಯಾಟಿಂಗ್ ರ್ಯಾಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ಅಭಿಷೇಕ್ ಶರ್ಮಾ

ಯೂತ್‌ ಟೆಸ್ಟ್‌: ಆಸ್ಟ್ರೇಲಿಯಾ ನೆಲದಲ್ಲೂ ಅಬ್ಬರಿಸಿ ಬೊಬ್ಬಿರಿದ 14ರ ಪೋರ ವೈಭವ್ ಸೂರ್ಯವಂಶಿ

ಏಷ್ಯಾ ಕಪ್ ಟ್ರೋಫಿ ಬೇಕಿದ್ರೆ ಸೂರ್ಯಕುಮಾರ್ ನೇ ನನ್ನತ್ರ ಬರಲಿ: ಮೊಹ್ಸಿನ್ ನಖ್ವಿ ಹೊಸ ನಖರಾ

IND vs WI: ಟೀಂ ಇಂಡಿಯಾ ಮುಂದಿನ ಮ್ಯಾಚ್ ಯಾರ ಜೊತೆಗೆ, ಇಲ್ಲಿದೆ ವೇಳಾಪಟ್ಟಿ

ಮುಂದಿನ ಸುದ್ದಿ
Show comments