Select Your Language

Notifications

webdunia
webdunia
webdunia
webdunia

2ನೇ ಟೆಸ್ಟ್: ಭಾರತ 364ಕ್ಕೆ ಆಲೌಟ್!

2ನೇ ಟೆಸ್ಟ್: ಭಾರತ 364ಕ್ಕೆ ಆಲೌಟ್!
bengaluru , ಶುಕ್ರವಾರ, 13 ಆಗಸ್ಟ್ 2021 (19:34 IST)
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ 3 ವಿಕೆಟ್ ಗೆ 276 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ಚಹಾ ವಿರಾಮಕ್ಕೂ ಮುನ್ನ 364 ರನ್ ಗಳಿಗೆ ಆಲೌಟಾಗಿದೆ.
ಇಂಗ್ಲೆಂಡ್ ಬೌಲರ್ ಗಳು ನೀಡಿದ ತಿರುಗೇಟಿನಿಂದ ಶತಕ ಬಾರಿಸಿದ್ದ ಕೆಎಲ್ ರಾಹುಲ್ ಬೇಗನೇ ನಿರ್ಗಮಿಸಿದರೆ, ಅಜಿಂಕ್ಯ ರಹಾನೆ (1) ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಗೆ ಹೆಜ್ಜೆ ಹಾಕಿದರು.
ಕೆಳ ಕ್ರಮಾಂಕದಲ್ಲಿ ರಿಷಭ್ ಪಂತ್ 58 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 37 ರನ್ ಬಾರಿಸಿ ಔಟಾದರೆ, ರವೀಂದ್ರ ಜಡೇಜಾ 120 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 40 ರನ್ ಗಳಿಸಿ ತಂಡವನ್ನು 350ರ ಗಡಿ ದಾಟಿಸಿದರು.
ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ 5 ವಿಕೆಟ್ ಪಡೆದರೆ, ಓಲಿ ರಾಬಿನ್ಸನ್ ಮತ್ತು ಮಾರ್ಕ್ ವುಡ್ ತಲಾ 2 ಮತ್ತು ಮೊಯಿನ್ ಅಲಿ 1 ವಿಕೆಟ್ ಗಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

2ನೇ ಟೆಸ್ಟ್: ಭಾರತ 7 ವಿಕೆಟ್ ಗೆ 346