Select Your Language

Notifications

webdunia
webdunia
webdunia
webdunia

ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್: ಭಾರತಕ್ಕೆ ಇಂದು ಶ್ರೀಲಂಕಾ ಎದುರಾಳಿ

ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್: ಭಾರತಕ್ಕೆ ಇಂದು ಶ್ರೀಲಂಕಾ ಎದುರಾಳಿ
ಮುಂಬೈ , ಮಂಗಳವಾರ, 10 ಮಾರ್ಚ್ 2020 (09:20 IST)
ಮುಂಬೈ: ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಇಂದು ಸಚಿನ್ ತೆಂಡುಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್ ತಂಡ ತಿಲಕರತ್ನೆ ದಿಲ್ಶನ್ ನೇತೃತ್ವದ ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು ಎದುರಿಸಲಿದೆ.


ಎರಡೂ ತಂಡಗಳೂ ಈಗಾಗಲೇ ಆರಂಭಿಕ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಲ್ಲಿದೆ. ಮೊದಲ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಆಡಿ ಗೆದ್ದರೆ ಲಂಕಾ ಆಸ್ಟ್ರೇಲಿಯಾ ವಿರುದ್ಧ ಗೆಲುವು ಕಂಡಿತ್ತು.

ಸಚಿನ್-ಸೆಹ್ವಾಗ್ ಜೋಡಿಯ ಮೋಡಿ, ಜಹೀರ್ ಖಾನ್ ಬೌಲಿಂಗ್ ಕರಾಮತ್ತು ನೋಡಲು ಜನ ಮೈದಾನದತ್ತ ಹರಿದುಬರುತ್ತಿದ್ದಾರೆ. ಈ ಹಳೆಯ ಹುಲಿಗಳು ಇನ್ನೂ ಹಳೆಯ ಶೈಲಿಯಲ್ಲೇ ಆಡುವುದನ್ನು ನೋಡಿ ಅಭಿಮಾನಿಗಳೂ ಖುಷಿಯಾಗಿದ್ದಾರೆ. ಇಂದಿನ ಪಂದ್ಯ ಡಿವೈ ಪಾಟೀಲ್ ಸ್ಟೇಡಿಯಂ ಮುಂಬೈನಲ್ಲಿ ನಡೆಯಲಿದ್ದು, ಕಲರ್ಸ್ ವಾಹಿನಿಯ ನೆಟ್ ವರ್ಕ್ ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ. ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಮಹಿಳಾ ತಂಡವನ್ನು ಫೈನಲ್ ತಲುಪಿಸಿದ್ದು ಅಮಿತ್ ಶಾ ಪುತ್ರನಾ?! ಗಂಗೂಲಿಗೆ ಟ್ವಿಟರಿಗರ ಟಾಂಗ್