Select Your Language

Notifications

webdunia
webdunia
webdunia
webdunia

ಹೆಸರು ಹಿಟ್ಟಿನ ಉಂಡೆ (Moong Dal Powder Laddu)

ಹೆಸರು ಹಿಟ್ಟಿನ ಉಂಡೆ (Moong Dal Powder Laddu)
ಬೆಂಗಳೂರು , ಸೋಮವಾರ, 15 ಅಕ್ಟೋಬರ್ 2018 (18:02 IST)
ಬೇಕಾಗುವ ಪದಾರ್ಥಗಳು:
ಹೆಸರುಬೇಳೆ- 1/2 ಕೆ.ಜಿ.
ಸಕ್ಕರೆ- ಮುಕ್ಕಾಲು ಬಟ್ಟಲು
ತುಪ್ಪ- ಕಾಲು ಬಟ್ಟಲು
ಕೊಬ್ಬರಿ ತುರಿ - 1 ಹಿಡಿ
ಗೋಡಂಬಿ- ಸ್ವಲ್ಪ
 
ಮಾಡುವ ವಿಧಾನ:
 
ಒಂದು ಪ್ಯಾನ್ ಅನ್ನು ತೆಗೆದುಕೊಳ್ಳಿ ಅದಕ್ಕೆ 1/2 ಕೆಜಿ ಹೆಸರುಬೇಳೆ ಹಾಕಿ ಹುರಿಯಿರಿ ಅದಕ್ಕೆ ಎಣ್ಣೆ/ತುಪ್ಪ ಏನನ್ನು ಹಾಕಬೇಡಿ. ನಂತರ ಹುರಿದ ಹೆಸರುಬೇಳೆ ತಣ್ಣಗಾದಾಗ ಜಾರ್ ಗೆ ಹಾಕಿ ಅದನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ನಂತರ ಇನ್ನೊಂದು ಜಾರಿನಲ್ಲಿ ಇಲ್ಲವೇ ಅದೇ ಜಾರಿನಲ್ಲಿ ಸಕ್ಕರೆ ಪುಡಿಯನ್ನು ತಯಾರಿಸಿಕೊಳ್ಳಿ. ನಂತರ ಕಾಲು ಭಾಗ ತುಪ್ಪವನ್ನು ಕರಗಿಸಿಕೊಳ್ಳಿ ಮತ್ತು ಗೋಡಂಬಿಯನ್ನು ಸಣ್ಣ ಚೂರುಗಳನ್ನಾಗಿ ಮಾಡಿಕೊಳ್ಳಿ.
 
ಈಗ ಬೆಂಕಿ ಹೊತ್ತಿಸಿ ಅದರ  ಮೇಲೆ ಪ್ಯಾನ್ ಇಟ್ಟು ತುಪ್ಪವನ್ನು ಹಾಕಿ ಅದು ಚೆನ್ನಾಗಿ ಕಾದ ಮೇಲೆ ಗೋಡಂಬಿ ಚುರುಗಳನ್ನು ಹಾಕಿ ಹುರಿದು ಸ್ಟೋವ್ ಆರಿಸಿ ನಂತರ ಪ್ಯಾನ್‌‌ಗೆ ಹಿಟ್ಟನ್ನು ಹಾಕಿ ಮುಗುಚಿ. ನಂತರ ಅದಕ್ಕೆ ಸಕ್ಕರೆ ಪುಡಿ, ಕೊಬ್ಬರಿ ತುರಿಯನ್ನು ಹಾಕಿ ಚೆನ್ನಾಗಿ ಮುಗುಚಿ ಹಾಗೆಯೇ ಬಿಡಿ ಸ್ವಲ್ಪ ಹೊತ್ತಿನ ಬಳಿಕ ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆಯನ್ನು ಮಾಡಿ ಇಟ್ಟರೆ ರುಚಿಕರವಾದ ಹೆಸರು ಹಿಟ್ಟಿನ ಉಂಡೆ ಸವಿಯಲು ಸಿದ್ಧ.

Share this Story:

Follow Webdunia kannada

ಮುಂದಿನ ಸುದ್ದಿ

ಈರುಳ್ಳಿ ಸಾಂಬಾರು (Baby Onion Sambar)