Publish Date: Sun, 14 Oct 2018 (07:55 IST)
Updated Date: Sun, 14 Oct 2018 (07:57 IST)
ಬೆಂಗಳೂರು: ತೂಕ ಕಳೆದುಕೊಳ್ಳಬೇಕೆನ್ನುವವರು ಹೆಚ್ಚು ಸರ್ಕಸ್ ಮಾಡಬೇಕೆಂದಿಲ್ಲ. ನಿಮ್ಮ ಮನೆಯಂಗಳದಲ್ಲಿ ಸುಲಭವಾಗಿ ಸಿಗುವ ಈ ಎರಡು ಹಣ್ಣುಗಳು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತವೆ.
ಸೀಬೇಕಾಯಿ
ಸಾಮಾನ್ಯವಾಗಿ ಮನೆಯ ಹಿತ್ತಲಲ್ಲಿ ಬೆಳೆಯಬಹುದಾದ ಸೀಬೇಕಾಯಿಯಲ್ಲಿ ವಿಟಮಿನ್ ಸಿ, ಪೋಷಕಾಂಶಗಳು ಹೇರಳವಾಗಿವೆ. ಅಲ್ಲದೆ ಇದರಲ್ಲಿ ಫೈಬರ್ ಅಂಶ ಹೇರಳವಾಗಿದ್ದು, ತೂಕ ಕಳೆದುಕೊಳ್ಳಲು, ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಹಣ್ಣು.
ಹಲಸಿನ ಹಣ್ಣು
ವಿಟಮಿನ್ ಬಿ6 ಹೇರಳವಾಗಿರುವ ಹಲಸಿನ ಹಣ್ಣಿನಲ್ಲಿ ಫೈಬರ್, ವಿಟಮಿನ್ ಎ, ಮತ್ತು ಹಲವು ಆಂಟಿ ಆಕ್ಸಿಡೆಂಟ್ ಗಳಿವೆ. ಇದರಲ್ಲಿರುವ ಫೈಬರ್ ಅಂಶ ಹಸಿವು ಕಡಿಮೆ ಮಾಡಿ ವಿಪರೀತ ತಿನ್ನುವ ಚಟಕ್ಕೆ ಬ್ರೇಕ್ ಹಾಕುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.