Select Your Language

Notifications

webdunia
webdunia
webdunia
webdunia

ಮುಟ್ಟಿನ ಹೊಟ್ಟೆ ನೋವು ನಿವಾರಣೆ ಉತ್ತಮ ಔಷಧ ಮೆಂತೆ ಚಹಾ

ಮುಟ್ಟಿನ ಹೊಟ್ಟೆ ನೋವು ನಿವಾರಣೆ ಉತ್ತಮ ಔಷಧ ಮೆಂತೆ ಚಹಾ
ಬೆಂಗಳೂರು , ಶನಿವಾರ, 13 ಅಕ್ಟೋಬರ್ 2018 (14:31 IST)
ಬೆಂಗಳೂರು : ಋತುಚಕ್ರದ ನೋವು ಮಹಿಳೆಯರಿಗೆ ಸಾಮಾನ್ಯವಾದದ್ದು. ಆ ಸಂದರ್ಭದಲ್ಲಿ ಕಿಬ್ಬೊಟ್ಟೆ ಮತ್ತು ಬೆನ್ನು ನೋವು ಸಾಮಾನ್ಯವಾಗಿ ಕಾಡುತ್ತದೆ. ಕೆಲವರಿಗೆ ವಾಕರಿಕೆ ಮತ್ತು ಮಾನಸಿಕವಾಗಿ ಖಿನ್ನತೆಯ ಭಾವನೆ ಮೂಡುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮೆಂತೆ ಚಹಾ ಸೇವನೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆಯಂತೆ.



ಮೆಂತೆಯು ರಕ್ತದಲ್ಲಿರುವ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಿ ಅಧಿಕ ಪ್ರಮಾಣದ ಕಬ್ಬಿಣಾಂಶವನ್ನು ದೇಹಕ್ಕೆ ನೀಡುತ್ತದೆ. ಹೀಗಾಗಿ, ವಿವಿಧ ಪ್ರೋಟಿನ್ ಹಾಗೂ ಪೋಷಕಾಂಶಗಳನ್ನು ಒಳಗೊಂಡಿರುವ ಮೆಂತೆ ಮನುಷ್ಯನಿಗೊಂದು ದಿವ್ಯ ಔಷಧ ಎನ್ನಬಹುದು. ಮುಟ್ಟಿನ ಸೆಳೆತ ಮತ್ತು ಹೊಟ್ಟೆ ಅಸ್ವಸ್ಥತೆಗೆ ಸಹಾಯ ಮಾಡುವಂತಹ ಈಸ್ಟ್ರೊಜೆನ್ ಕ್ರಿಯೆಯನ್ನು ಅನುಕರಿಸುವ ಡಯೋಸ್​​​ಜೆನಿನ್ ಮತ್ತು ಐಸೊಫ್ಲೋವೊನ್​​ಗಳನ್ನು ನಿಯಂತ್ರಿಸುವ ಗುಣ ಮೆಂತ್ಯ ಒಳಗೊಂಡಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.


ಮೆಂತೆ ಚಹಾ ತಯಾರಿಸುವ ವಿಧಾನ :
ಒಂದು ಪಾತ್ರೆಯಲ್ಲಿ ನಾಲ್ಕು ಕಪ್ ನೀರನ್ನು ಹಾಕಿ, ಮಧ್ಯಮ ಉರಿಯಲ್ಲಿ ನೀರನ್ನು ಕುದಿಸಿ, ಕುದಿಯಲು ಪ್ರಾರಂಭಿಸಿದ ಮೇಲೆ ಒಂದು ಟೀ ಚಮಚ ಮೆಂತೆಯನ್ನು ಸೇರಿಸಿ. ನಂತರ ಪಾತ್ರೆಗೆ ಮುಚ್ಚಳವನ್ನು ಮುಚ್ಚಿ, ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಯಲು ಬಿಡಿ. ನೀರಿನ ಬಣ್ಣವು ಹಳದಿ ಬಣ್ಣಕ್ಕೆ ತಿರುಗಿದ ನಂತರ ಉರಿಯನ್ನು ಆರಿಸಿ, ಚಹಾ ತಣಿಯಲು ಬಿಡಿ, ನಂತರ ಮೆಂತೆ ಬೀಜವನ್ನು ಸೋಸಿದರೆ ಮೆಂತೆ ಟೀ ಸೇವಿಸಲು ಸಿದ್ಧವಾಗುತ್ತದೆ.


ಮುಟ್ಟಿನ ಸಂದರ್ಭ ಪ್ರತಿ ದಿನ ಈ ಟೀ ತಯಾರಿಸುವ ಗೋಜಿಗೆ ಹೋಗಬೇಕಿಲ್ಲ. ಒಮ್ಮೆ ತಯಾರಿಸಿ ಶೇಖರಿಸಿಟ್ಟುಕೊಂಡು ಆಗಾಗ ಸೇವಿಸಬಹುದು. ಇದರಿಂದ ಮುಟ್ಟಿನ ನೋವು ನಿವಾರಣೆ ಜತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಿಲನ ಕ್ರಿಯೆ ಹೃದಯಕ್ಕೆ ಒಳ್ಳೆಯದು! ಆದರೆ ಒಂದು ಷರತ್ತು!