Webdunia - Bharat's app for daily news and videos

Install App

ಪ್ರೋಟೀನ್ ಅಷ್ಟೇ ಅಲ್ಲ , ರುಚಿಯಲ್ಲಿಯೂ ಚೆನ್ನ ನೀವೂ ರುಚಿ ನೋಡಿ

Webdunia
ಮಂಗಳವಾರ, 23 ಆಗಸ್ಟ್ 2022 (13:12 IST)
ಸೋಯಾ ಬೀನ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ? ಎಲ್ಲಾ ವಯಸ್ಸಿನವರಿಗೂ ಈ ರುಚಿ ಇಷ್ಟ ಆಗುವಾಗುತ್ತದೆ.

ಸೋಯಾದಲ್ಲಿ ಹೆಚ್ಚು ಪ್ರೋಟೀನ್ ಇದ್ದು, ಜನರಿಗೆ ಬೇಕಾದ ಪೋಷಕಾಂಶವನ್ನು ಉತ್ತಮವಾಗಿ ನೀಡುತ್ತೆ.

ಅದಕ್ಕೆ ಇಂದು ಆರೋಗ್ಯಕ್ಕೂ ಒಳ್ಳೆಯದು ಮತ್ತು ಬಾಯಿ ರುಚಿಗೂ ಸಿಗಬೇಕು ಎಂದು ‘ಸೋಯಾ ಕರಿ’ ಮಾಡುವುದನ್ನು ಹೇಳಿಕೊಡುತ್ತಿದ್ದೇವೆ. ಈ ವಿಧಾನವನ್ನು ಓದಿ ಹೇಗೆ ‘ಸೋಯಾ ಕರಿ’ ಮಾಡಬಹುದು ಎಂದು ತಿಳಿದುಕೊಳ್ಳಿ.

ಬೇಕಾಗಿರುವ ಪದಾರ್ಥಗಳು

* ಸೋಯಾ – 2 ಕಪ್
* ಸಾಸಿವೆ ಎಣ್ಣೆ – ಅರ್ಧ ಟೀಸ್ಪೂನ್
* ಕೊತ್ತಂಬರಿ ಸೊಪ್ಪು – ಅರ್ಧ ಕಪ್
* ರುಚುಗೆ ತಕ್ಕಷ್ಟು ಉಪ್ಪು
* ಕಟ್ ಮಾಡಿದ ಈರುಳ್ಳಿ – 1 ಕಪ್
* ಕಟ್ ಮಾಡಿದ ಟೊಮೆಟೊ – 1 ಕಪ್
* ಹಸಿರು ಮೆಣಸಿನಕಾಯಿ – 2
* ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್

* ಕೆಂಪುಮೆಣಸು – 1 ಟೀಸ್ಪೂನ್
* ಅರಿಶಿನ ಪುಡಿ – ಅರ್ಧ ಟೀಸ್ಪೂನ್
* ಜೀರಿಗೆ ಪುಡಿ – 1 ಟೀಸ್ಪೂನ್
* ದಾನಿಯಾ ಪುಡಿ – 1 ಟೀಸ್ಪೂನ್
* ಗರಂ ಮಸಾಲಾ – ಅರ್ಧ ಟೀಸ್ಪೂನ್

ಮಾಡುವ ವಿಧಾನ

* ಸೋಯಾ ಬೀನ್ಸ್ಗಳನ್ನು ಬಿಸಿ ನೀರಿನಲ್ಲಿ 15 ನಿಮಿಷಗಳ ಕಾಲ ಮುಚ್ಚಿಡಿ. ನಂತರ ಸೋಯಾ ಬೀನ್ಸ್ ಸೋಸಿ ತಣ್ಣಗಾಗುವವರೆಗೂ ಬಿಡಿ. ಸೋಯಾದಲ್ಲಿರುವ ನೀರನ್ನು ಸಂಪೂರ್ಣವಾಗಿ ಹಿಂಡಿ. ಪಕ್ಕಕ್ಕೆ ಹಿಡಿ.
* ಒಂದು ಜಾರಿಗೆ ಕಟ್ ಮಾಡಿದ ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿಗಳು, ಶುಂಠಿ, ಬೆಳ್ಳುಳ್ಳಿ ಪೇಸ್ಟ್ಗಳನ್ನು ಹಾಕಿ ನಯವಾದ ಪೇಸ್ಟ್ ಮಾಡಿ.
* ಗ್ಯಾಸ್ ಮೇಲೆ ಬಾಣಲೆಯನ್ನು ಇಟ್ಟು ಅದಕ್ಕೆ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಮಸಾಲಾ ಪೇಸ್ಟ್ ನಿಧಾನವಾಗಿ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ.

* ನಂತರ ಅದಕ್ಕೆ ಕೆಂಪುಮೆಣಸು, ಅರಿಶಿನ ಪುಡಿ, ಜೀರಿಗೆ ಪುಡಿ, ದಾನಿಯಾ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಫ್ರೈ ಮಾಡಿ. ನಂತರ ಎಣ್ಣೆಯು ಪಾತ್ರೆಯ ಬದಿಗಳನ್ನು ಬಿಡುವವರೆಗೆ ಚೆನ್ನಾಗಿ ಫ್ರೈ ಮಾಡಿ.
* ಈಗ, ನೆನೆಸಿದ ಮತ್ತು ಹಿಂಡಿದ ಸೋಯಾ ತುಂಡುಗಳನ್ನು ಮಸಾಲೆಯೊಂದಿಗೆ ಮಿಕ್ಸ್ ಮಾಡಿ ಸುಮಾರು 2-3 ನಿಮಿಷಗಳ ಕಾಲ ಎಲ್ಲವನ್ನೂ ಫ್ರೈ ಮಾಡಿ.
* ಅದಕ್ಕೆ 1.5 ಕಪ್ ನೀರನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಫ್ರೈ ಮಾಡಿ. 5 ನಿಮಿಷ ಬಿಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments