Select Your Language

Notifications

webdunia
webdunia
webdunia
webdunia

ಸಕ್ಕತ್ ಟೇಸ್ಟೀ ಪೆಪ್ಪರ್ ಮಟನ್ ಸೂಪ್ ಟ್ರೈ ಮಾಡಿ

ಸಕ್ಕತ್ ಟೇಸ್ಟೀ ಪೆಪ್ಪರ್ ಮಟನ್ ಸೂಪ್ ಟ್ರೈ ಮಾಡಿ
ಬೆಂಗಳೂರು , ಭಾನುವಾರ, 24 ಅಕ್ಟೋಬರ್ 2021 (11:39 IST)
ಚಳಿಗಾಲದ ದಿನ ಬಿಸಿಬಿಸಿಯಾಗಿ ಬಡಿಸಲಾಗುತ್ತದೆ. ಈ ಮಸಾಲೆಯುಕ್ತ ಸೂಪ್ ಶೀತ ಮತ್ತು ಜ್ವರಕ್ಕೆ ಅತ್ಯುತ್ತಮ ಮನೆಮದ್ದು.ಆದ್ದರಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ ಇದು ಉತ್ತಮ ಪರಿಹಾರ ಎನ್ನುತ್ತಾರೆ.
ಬಿಸಿ ಬಿಸಿ ಖಾರ ಖಾರದ ವಿಭಿನ್ನ ರುಚಿಯನ್ನು ಹೊಂದಿರುವ ಈ ಸೂಪ್ ಮಾಡುವುದು ಸುಲಭ. 
ಪೆಪ್ಪರ್ ಮಟನ್ ಸೂಪ್
ಮೊದಲನೆಯದಾಗಿ, ಮೂಳೆಗಳಿರುವ ಮಟನ್ ಖರೀದಿಸುವುದು ಉತ್ತಮ. ಸಾಮಾನ್ಯವಾಗಿ, ಮಟನ್ ಸೂಪ್ ಅನ್ನು ಮೇಕೆ  ಕಾಲುಗಳಿಂದ ತಯಾರಿಸಲಾಗುತ್ತದೆ. ಇದು ಮೂಳೆ ಆಧಾರಿತ ಸೂಪ್ ಆಗಿದ್ದು, ಸಾಕಷ್ಟು ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತದೆ. ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ಇದು ಆರಾಮದಾಯಕವಾದ ಆಹಾರ ಎನ್ನಲಾಗುತ್ತದೆ.ಎರಡನೆಯದಾಗಿ, ತಾಜಾ ಶುಂಠಿ, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸೇರಿಸಿ. ಅಲ್ಲದೇ ಅರಿಶಿನವನ್ನು ಪುಡಿ ಬಳಸುವ ಬದಲು ತಾಜಾ ಅರಿಶಿನ ಬಳಕೆ ಮಾಡಿದರೆ ಉತ್ತಮ ರುಚಿ ಸಿಗುತ್ತದೆ.
ಬೇಕಾಗುವ ಪದಾರ್ಥಗಳು
ಮೂಳೆಗಳಿರುವ 1/2 ಕೆಜಿ ಮಟನ್
1 ಮಧ್ಯಮ ಗಾತ್ರದ ಟೊಮೆಟೊ
4 ರಿಂದ 5 ಕರಿಬೇವಿನ ಎಲೆಗಳು
1 ಚಮಚ ಎಳ್ಳಿನ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
3 ಕಪ್ ನೀರು
1 ಟೀಸ್ಪೂನ್  ಮೆಣಸುಕಾಳುಗಳು
1/2 ಟೀಸ್ಪೂನ್ ಜೀರಿಗೆ
1 ಇಂಚಿನ ತಾಜಾ ಶುಂಠಿ,
4 ರಿಂದ 5 ಬೆಳ್ಳುಳ್ಳಿ ಎಸಳು
1 ತಾಜಾ ಅರಿಶಿನ ಅಥವಾ 1/2 ಟೀಸ್ಪೂನ್ ಅರಿಶಿನ ಪುಡಿ
ಮಾಡುವ ವಿಧಾನ
ಮೊದಲಿಗೆ ಮಟನ್ ಅನ್ನು  ಸರಿಯಾಗಿ ಸ್ವಚ್ಛ ಮಾಡಿಕೊಳ್ಳಿ.ಟೊಮೆಟೊವನ್ನು ನುಣ್ಣಗೆ ಪೇಸ್ಟ್ ಮಾಡಿಕೊಂಡು ಬದಿಯಲ್ಲಿರಿಸಿ. ಆಲೂಗಡ್ಡೆ, ಮೆಣಸುಕಾಳುಗಳು, ಜೀರಿಗೆ, ಶುಂಠಿ, ಬೆಳ್ಳುಳ್ಳಿ ಮತ್ತು ಅರಿಶಿನವನ್ನು ಹಾಕಿ ರುಬ್ಬಿ ಇಟ್ಟುಕೊಳ್ಳಿ. ಒರಟಾಗಿ ಪುಡಿ ಮಾಡುವುದು ಹೆಚ್ಚಿನ ರುಚಿ ನೀಡುತ್ತದೆ.  ಪ್ರೆ
ಶರ್ ಕುಕ್ಕರ್ನಲ್ಲಿ, ಮಟನ್ ತುಂಡುಗಳು, ರುಬ್ಬಿದ ಈರುಳ್ಳಿ ಪೆಪ್ಪರ್ ಪೇಸ್ಟ್, ಸ್ಕ್ವೀಝ್ ಮಾಡಿದ ಟೊಮೆಟೊ, ಕರಿಬೇವಿನ ಎಲೆಗಳು ಮತ್ತು  ಉಪ್ಪನ್ನು ಹಾಕಿ ನಂತರ ನೀರು ಮತ್ತು ಎಣ್ಣೆಯನ್ನು ಅದಕ್ಕೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.ಎಲ್ಲ ಮಸಾಲೆಗಳು ಮಟನ್ ಜೊತೆ ಸರಿಯಾಗಿ ಬೆರೆಸುವುದು ಮುಖ್ಯ. ಹೆಚ್ಚಿನ ಉರಿಯಲ್ಲಿ ಒಂದು ಸೀಟಿ ಬರುವ ತನಕ ಬೇಯಿಸಿ ನಂತರ ಅದನ್ನು ಕಡಿಮೆ ಉರಿಯಲ್ಲಿ ಇನ್ನೊಂದು 10 ನಿಮಿಷ ಬೇಯಿಸಿ.
ನಂತರ ಗ್ಯಾಸ್ ಆಫ್ ಮಾಡಿ. ಸ್ವಲ್ಪ ಸಮಯದ ನಂತರ ಅಂದರೆ ಕುಕ್ಕರ್ನ  ಒತ್ತಡ ಕಡಿಮೆಯಾದ ನಂತರ, ಮುಚ್ಚಳವನ್ನು ತೆರೆಯಿರಿ ಮತ್ತು ಅದನ್ನು ನಿಧಾನವಾಗಿ ಮಿಶ್ರಣ ಮಾಡಿ. ಉಪ್ಪು ಮತ್ತು ಖಾರ ಎಲ್ಲವೂ ಸರಿಯಾಗಿದೆಯ ಎಂಬುದನ್ನ ನೋಡಿ. ಅಗತ್ಯವಿದ್ದರೆ ಸೇರಿಸಿ. ಅಲ್ಲದೇ ಇದಕ್ಕೆ ಅರ್ಧ ಚಮಚ ಎಳ್ಳಿನ ಎಣ್ಣೆ ಹಾಕಿದರೆ ಉತ್ತಮ ಪರಿಮಳ ಮತ್ತು ರುಚಿ ನೀಡುತ್ತದೆ. ಅಂತಿಮವಾಗಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿ ರುಚಿಯಾದ ಮಂಡ್ಯ ಸ್ಟೈಲ್ ಮಟನ್ ಸೂಪ್ ರೆಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯಕರ ಜೀವನಕ್ಕೆ ಮನೆ ಮದ್ದು ತಪ್ಪದೇ ಪಾಲಿಸಿ