Select Your Language

Notifications

webdunia
webdunia
webdunia
webdunia

ತೂಕ ಇಳಿಸಲು ಅಂಜೂರ ತುಂಬಾ ಸಹಕಾರಿ

ತೂಕ ಇಳಿಸಲು ಅಂಜೂರ ತುಂಬಾ ಸಹಕಾರಿ
ಬೆಂಗಳೂರು , ಬುಧವಾರ, 5 ಜನವರಿ 2022 (09:08 IST)
ಒಣಗಿಸಿದ ಅಂಜೂರದಲ್ಲಿ ಪ್ರೋಟೀನ್, ನಾರಿನಾಂಶ ಮತ್ತು ಸಣ್ಣ ಪ್ರಮಾಣದ ಕೊಬ್ಬು ಹಾಗೂ ಕ್ಯಾಲ್ಸಿಯಂ, ಪೊಟಾಶಿಯಂ,ಕಬ್ಬಿಣಾಂಶ ಮತ್ತು ತಾನ್ರ ಇದ್ದು ಇದು ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸಲು ಸಹಕಾರಿ.
 
ಇದರಲ್ಲಿ ನಾರಿನಾಂಶ, ಪ್ರೋಟೀನ್ ಇರುವ ಕಾರಣದಿಂದಾಗಿ ಹೆಚ್ಚು ಅನಗತ್ಯ ಆಹಾರಗಳನ್ನು ತಿನ್ನದಂತೆ ತಡೆಯುತ್ತದೆ. ಇದರಿಂದ ದೇಹದ ತೂಕ ನಿರ್ವಹಣೆ ಮಾಡುವುದು ಸುಲಭ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರೆ, ಇದನ್ನ ಸಂಜೆಯ ಸಮಯದಲ್ಲಿ ಸೇವನೆ ಮಾಡುವುದು ಹೆಚ್ಚು ಪ್ರಯೋಜನ ನೀಡುತ್ತದೆ.

ಅತಿಯಾಗಿ ಸುಸ್ತಾದಾಗ ಅಥವಾ ತುಂಬಾ ಆಯಾಸ ಅನಿಸಿದಾಗ ಒಂದು ಲೋಟ ಹಾಲಿನಲ್ಲಿ ಅಂಜೂರವನ್ನು ನೆನೆಸಿ ಕುಡಿಯುವುದು ಶಕ್ತಿ ಪಡೆಯಲು ಸಹಕಾರಿ ಎನ್ನುತ್ತಾರೆ ವೈದ್ಯರು.

ಒಣ ಅಂಜೂರವನ್ನು ರಾತ್ರಿ ನೆನೆಸಿ ಬೆಳಗ್ಗೆ ಅದರ ನೀರಿನ ಜೊತೆ ತಿನ್ನುವುದು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಮಲಬದ್ಧತೆ ಸಮಸ್ಯೆ ಎದುರಿಸುತ್ತಿದ್ದರೆ, ಇದರ ಸೇವನೆ ಉಪಯೋಗ ಎನ್ನಲಾಗುತ್ತದೆ.

ಇನ್ನು ಒಣ ಅಂಜೂರವನ್ನು ಹಾಲಿನಲ್ಲಿ ನೆನೆಸಿ ಕುಡಿಯುವ ಹಾಗೆಯೇ ಅದನ್ನು ಬೇಯಿಸಿ ಕುಡಿಯುವುದು ಸಹ ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು. ಇದು ಸಹ ನಿಮ್ಮ ತೂಕವನ್ನು ಇಳಿಸಲು ಸಹಕಾರಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಒಮಿಕ್ರಾನ್ ವಿರುದ್ಧ ಹೋರಾಡಲು ಇಲ್ಲಿದೆ ಉಪಾಯ