Select Your Language

Notifications

webdunia
webdunia
webdunia
webdunia

ಸ್ವಾದಿಷ್ಠ ವೆಜ್ ಮಂಚೂರಿಯನ್

ಸ್ವಾದಿಷ್ಠ ವೆಜ್ ಮಂಚೂರಿಯನ್

ಅತಿಥಾ

ಬೆಂಗಳೂರು , ಶುಕ್ರವಾರ, 2 ಫೆಬ್ರವರಿ 2018 (16:31 IST)
ಬೇಕಾಗುವ ಸಾಮಗ್ರಿಗಳು
 
2 ಕಪ್ ಎಲೆಕೋಸು (ಪಟ್ಟಾ ಗೋಬಿ) ಬಹಳ ಚಿಕ್ಕದಾಗಿ ಹೆಚ್ಚಿದ್ದು
1 ಕಪ್ ತುರಿದ ಕ್ಯಾರೆಟ್ 
3 ಚಮಚ ಬೆಳ್ಳುಳ್ಳಿ ಚಿಕ್ಕದಾಗಿ ಹೆಚ್ಚಿದ್ದು
3 ಚಮಚ ಶುಂಠಿ ಚಿಕ್ಕದಾಗಿ ಹೆಚ್ಚಿದ್ದು
1 ಚಮಚ ಕರಿಮೆಣಸಿನ ಪುಡಿ
2 ಚಮಚ ಉಪ್ಪು
2 ಚಮಚ ಸೋಯ್ ಸಾಸ್
4 ಚಮಚ ಮೈದಾ
5 ಚಮಚ ಕಾರ್ನ್ ಹಿಟ್ಟು
2 ಚಮಚ ಎಣ್ಣೆ
1 ಸಣ್ಣ ಹೆಚ್ಚಿದ ಈರುಳ್ಳಿ
1.5 ಕಪ್ ನೀರು
2 ಚಮಚ ಸ್ಪ್ರಿಂಗ್ ಒನಿಯನ್ (ಈರುಳ್ಳಿಯ ಎಲೆ ) ಹೆಚ್ಚಿದ್ದು
1 ಚಮಚ ಚಿಲಿ ಸಾಸ್
1 ಚಮಚ ವಿನೆಗರ್
ಮಾಡುವ ವಿಧಾನ
 
- ಒಂದು ಬಟ್ಟಲಲ್ಲಿ 2 ಕಪ್ ಎಲೆಕೋಸು, 1 ಕಪ್ ತುರಿದ ಕ್ಯಾರೆಟ್, 1 ಚಮಚ ಶುಂಠಿ, 1 ಚಮಚ ಬೆಳ್ಳುಳ್ಳಿ, 1 ಚಮಚ ಕರಿಮೆಣಸಿನ ಪುಡಿ, 1 ಚಮಚ ಉಪ್ಪು, 1 ಚಮಚ ಸೋಯಾ ಸಾಸ್, 4 ಚಮಚ ಮೈದಾ ಹಿಟ್ಟು ಮತ್ತು 3 ಚಮಚ ಕಾರ್ನ್ ಹಿಟ್ಟು ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಸೇರಿಸಿ.
- ಮಿಶ್ರಣದ ಸಣ್ಣ ಭಾಗವನ್ನು ತೆಗೆದುಕೊಂಡು ಸಣ್ಣ ಉಂಡೆಯ ಆಕಾರಕ್ಕೆ ಮಾಡಿ 
- ಈಗ ಒಂದು ಪ್ಯಾನ್ ಬಿಸಿ ಮಾಡಿ ಮತ್ತು ಎಣ್ಣೆ ಹಾಕಿ ಬಿಸಿ ಮಾಡಿ
- ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವ ತನಕ ಎಲ್ಲಾ ಉಂಡೆಗಳನ್ನು ಫ್ರೈ ಮಾಡಿ.
-  ಈಗ, ಒಂದು ಪ್ಯಾನ್ ಬಿಸಿ ಮತ್ತು 2 ಚಮಚ ಎಣ್ಣೆ ಹಾಕಿ, ಇದಕ್ಕೆ 2 ಚಮಚ ಶುಂಠಿ ಮತ್ತು 2 ಚಮಚ ಬೆಳ್ಳುಳ್ಳಿ, ಹೆಚ್ಚಿದ ಈರುಳ್ಳಿ ಸೇರಿಸಿ ಮತ್ತು ಕಂದು ಬಣ್ಣ ಬರುವ ತನಕ ಬೇಯಿಸಿ.
- ಈಗ ಬಟ್ಟಲಲ್ಲಿ 2 ಚಮಚ ಕಾರ್ನ್ ಹಿಟ್ಟು ಮತ್ತು 1/2 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಈ ಮಿಶ್ರಣವನ್ನು ಈರುಳ್ಳಿ ಮಿಶ್ರಣಕ್ಕೆ ಸೇರಿಸಿ.
- 1 ಚಮಚ ಸೋಯಾ ಸಾಸ್ ಮತ್ತು ಸ್ಪ್ರಿಂಗ್ ಒನಿಯನ್ ಸೇರಿಸಿ ಮತ್ತು ಮಿಶ್ರಣ ಮಾಡಿ.
- 1 ಚಮಚ ಚಿಲಿ ಸಾಸ್ ಮತ್ತು 1 ಕಪ್ ನೀರು ಸೇರಿಸಿ. ಚೆನ್ನಾಗಿ ಬೆರೆಸಿ.
- ಈಗ 1 ಚಮಚ ಉಪ್ಪು ಮತ್ತು 1 ಚಮಚ ವಿನೆಗರ್ ಸೇರಿಸಿ ಮತ್ತು ಮಿಶ್ರಣ ಮಾಡಿ.
- ಅದಕ್ಕೆ ತಯಾರಿಸಿದ ಉಂಡೆಗಳನ್ನು ಸೇರಿಸಿ ಮತ್ತು 2 ನಿಮಿಷ ಬೇಯಿಸಿ.
 
ಇದು ಫ್ರೈಡ್ ರೈಸ್ ಅಥವಾ ನೂಡಲ್ಸ್ ಜೊತೆ ಸವಿಯಲು ತುಂಬಾ ಚೆನ್ನಾಗಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹಾಲುಸೋರೆಕಾಯಿ ಹಲ್ವಾ...!!