Select Your Language

Notifications

webdunia
webdunia
webdunia
webdunia

ಸ್ವಾದಿಷ್ಠ ಸಬ್ಬಕ್ಕಿ ಪಡ್ಡು

ಸ್ವಾದಿಷ್ಠ ಸಬ್ಬಕ್ಕಿ ಪಡ್ಡು

ಅತಿಥಾ

ಬೆಂಗಳೂರು , ಶುಕ್ರವಾರ, 2 ಫೆಬ್ರವರಿ 2018 (15:57 IST)
ಬೇಕಾಗುವ ಸಾಮಗ್ರಿಗಳು
1/2 ಕಪ್ ಸಬ್ಬಕ್ಕಿ
1/4 ಕಪ್ ರಾವಾ
1 ಚಮಚ ಮೊಸರು
1 ಈರುಳ್ಳಿ ಸಣ್ಣದಾಗಿ ಹೆಚ್ಚಿದ್ದು
1 ಚಮಚ ಸಣ್ಣದಾಗಿ ಹೆಚ್ಚಿದ ಕರಿಬೇವಿನ ಎಲೆಗಳು
1 ಚಮಚ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು
1 - 2 ಹಸಿರು ಮೆಣಸಿನಕಾಯಿ ಸಣ್ಣದಾಗಿ ಹೆಚ್ಚಿದ್ದು
ಚಿಕ್ಕ ಶುಂಠಿ ಸಣ್ಣದಾಗಿ ಹೆಚ್ಚಿದ್ದು
ಎಣ್ಣೆ
ಉಪ್ಪು
ತಯಾರಿಸುವ ವಿಧಾನ:
- ಸಬ್ಬಕ್ಕಿಯನ್ನು 4 - 5 ಗಂಟೆಗಳ ಕಾಲ ಅಗತ್ಯವಿರುವಷ್ಟು ನೀರಿನಲ್ಲಿ ನೆನೆಸಿ. 
- ಸಬ್ಬಕ್ಕಿ ನೆನೆದ ನಂತರ ನೀರನ್ನು ತೆಗೆದು, ಒಂದು ಬಟ್ಟಲಿಗೆ ತೆಗೆದುಕೊಳ್ಳಿ, ಲಂತರ ಅದಕ್ಕೆ ರವಾ, ಉಪ್ಪು, ಮೊಸರು, ಈರುಳ್ಳಿ, ಕರಿಬೇವಿನ ಎಲೆಗಳು, 
 
ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ, ಶುಂಠಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಈಗ ಪಡ್ಡು ಮಾಡುವ ತವಾಗೆ ಎಣ್ಣೆ ಸವರಿ ಬಿಸಿ ಮಾಡಿ, ಅದಕ್ಕೆ ಮಿಶ್ರಣ ಮಾಡಿದ ಸಬ್ಬಕ್ಕಿ ಮಿಶ್ರಣವನ್ನು ಹಾಕಿ, ಎರಡು ಬದಿಗಳಲ್ಲಿಯೂ ಚೆನ್ನಾಗಿ ಹುರಿಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪೆಪ್ಪರ್ ಸಿಗಡಿ ಮಸಾಲಾ