Select Your Language

Notifications

webdunia
webdunia
webdunia
webdunia

ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ ಈ ರವಾ ಹಾಲ್ಬಾಯಿ

ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ ಈ ರವಾ ಹಾಲ್ಬಾಯಿ
ಬೆಂಗಳೂರು , ಶನಿವಾರ, 29 ಆಗಸ್ಟ್ 2020 (07:39 IST)
ಬೆಂಗಳೂರು : ರವಾ ಹಾಲ್ಬಾಯಿ ತಿನ್ನಲು ಬಹಳ  ರುಚಿಕರವಾಗಿರುತ್ತದೆ. ಇದನ್ನು ಮಾಡುವುದು ಹೇಗೆಂಬುದನ್ನು ತಿಳಿದುಕೊಳ್ಳೋಣ.

ಬೇಕಾಗುವ ಸಾಮಾಗ್ರಿಗಳು : 1 ಕಪ್ ಚಿರೋಟಿ ರವಾ, 1 ಕಪ್ ತೆಂಗಿನಕಾಯಿ ತುರಿ, 1 ಕಪ್ ಬೆಲ್ಲ, 4 ಏಲಕ್ಕಿ, 5 ಲವಂಗ, 3 ಚಮಚ ತುಪ್ಪ, 2 ½ ಕಪ್ ನೀರು.

ಮಾಢುವ ವಿಧಾನ : ರವಾವನ್ನು 1 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ಅದಕ್ಕೆ ಲವಂಗ, ತೆಂಗಿನಕಾಯಿ, ಏಲಕ್ಕಿ ಸೇರಿಸಿ ರುಬ್ಬಿಕೊಳ್ಳಿ. ಇದಕ್ಕೆ ನೀರಿನಲ್ಲಿ ಕರಗಿಸಿದ ಬೆಲ್ಲವನ್ನು ಮಿಕ್ಸ್ ಮಾಡಿ ಚೆನ್ನಾಗಿ ಬೇಯಿಸಿ. ಅದು ದಪ್ಪವಾದ ಬಳಿಕ ಅದಕ್ಕೆ 1 ಚಮಚ ತುಪ್ಪ ಸೇರಿಸಿ. ಈ ಮಿಶ್ರಣ ತಳಬಿಟ್ಟ ಬಳಿಕ ಅದನ್ನು ಒಂದು ಪಾತ್ರೆಗೆ ವರ್ಗಾಯಿಸಿ ಸಮವಾಗಿ ಹರಡಿ. ಅದು ಬೆಚ್ಚಗಿರುವಾಗ ನಿಮಗೆ ಬೇಕಾ ಆಕಾರದಲ್ಲಿ ಕತ್ತರಿಸಿದರೆ ರವಾ ಹಾಲ್ಬಾಯಿ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಊಟಕ್ಕಿಂತ ಮೊದಲು ನೀರು ಕುಡಿದರೆ ಏನಾಗುತ್ತದೆ ಗೊತ್ತಾ?