ರುಚಿ ರುಚಿಯಾದ ವೆಜ್ ಕಟ್ಲೆಟ್

Webdunia
ಶನಿವಾರ, 18 ಆಗಸ್ಟ್ 2018 (11:57 IST)
ಬೆಂಗಳೂರು: ಚುಮು ಚುಮು ಮಳೆಗೆ ಬಿಸಿ ಬಿಸಿಯಾದ ಖಾದ್ಯಗಳನ್ನು ಸವಿಯುತ್ತಿದ್ದರೇ, ಹೊತ್ತು ಹೋಗುವುದೇ ತಿಳಿಯುವುದಿಲ್ಲ. ಒಂದಷ್ಟು ತರಕಾರಿಯಿದ್ದರೆ ಮನೆಯಲ್ಲಿಯೇ ವೆಜ್ ಕಟ್ಲೆಟ್ ಗಳನ್ನು ಮಾಡಿ ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು

ಆಲೂಗಡ್ಡೆ -4, ಈರುಳ್ಳಿ ಎರಡು, ಎರಡು ಕ್ಯಾರೆಟ್, ಕಾಲು ಕಪ್ ಹಸಿ ಬಟಾಣಿ. ಕಾಲು ಕಪ್ ಬ್ರೆಡ್ ತುಣುಕುಗಳು. ಒಂದು ಚಮಚ ಮೈದಾ, ಒಂದು ಚಮಚ ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಚಮಚ ಕಾರದ ಪುಡಿ ಮತ್ತು ಗರಂ ಮಸಾಲೆ ಪುಡಿ.
 

ವಿಧಾನ:
ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಕೈಯಿಂದ ಪುಡಿಪುಡಿ ಮಾಡಿಟ್ಟು ಕೊಳ್ಳಿ. ಕ್ಯಾರೆಟನ್ನು ಪುಟ್ಟಪುಟ್ಟದಾಗಿ ಕತ್ತರಿಸಿ ಬಟಾಣಿ ಕಾಳಿ ನೊಂದಿಗೆ ಬೇಯಿಸಿ. ಈರುಳ್ಳಿ ಕತ್ತರಿಸಿಟ್ಟು ಕೊಳ್ಳಿ. ಬಾಣಲೆಯಲ್ಲಿ ಎಣ್ಣೆಹಾಕಿ ಬಿಸಿಮಾಡಿ ಈರುಳ್ಳಿ ತುಣುಕುಗಳನ್ನು ಹಾಕಿ ಹುರಿಯಿರಿ. ಇದಕ್ಕೆ ಬೆಂದ ಆಲೂ, ಕ್ಯಾರೆಟ್ ಮತ್ತು ಬಟಾಣಿ ಸೇರಿಸಿ ನೀರಿಂಗುವ ತನಕ ಹುರಿಯಿರಿ. ಉಪ್ಪು ಖಾರಪುಡಿ, ಗರಂ ಮಸಾಲೆಪುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಒಲೆಯಿಂದ ಕೆಳಗಿರಿಸಿ.ಪಾತ್ರೆಯೊಂದರಲ್ಲಿ ಮೈದಾ ಮತ್ತು ಅಕ್ಕಿಹುಡಿಯನ್ನು ಸೇರಿಸಿ ಸ್ಪಲ್ಪ ನೀರುಹಾಕಿ ಪೇಸ್ಟ್ ಮಾಡಿಟ್ಟು ಕೊಳ್ಳಿ. ತರಕಾರಿ ಮಿಶ್ರಣವನ್ನು ಉಂಡೆಗಳಾಗಿಸಿ ಈ ಪೇಸ್ಟಿನಲ್ಲಿ ಮುಳುಗಿಸಿ ಇದಕ್ಕೆ ಬ್ರೆಡ್ ತುಣುಕುಗಳನ್ನು ಸೇರಿಸಿ ಬಾಳೆಎಲೆ ಅಥವಾ ದಪ್ಪ ಪ್ಲಾಸ್ಟಿಕ್‌ಗೆ ಎಣ್ಣೆ ಸವರಿ ಅದರ ಮೇಲೆ ಉಂಡೆಗಳನ್ನು ಇರಿಸಿ ಬೇಕಾದ ಆಕಾರಕ್ಕೆ ಒತ್ತಿ. ಕಾವಲಿ ಬಿಸಿಗಿಟ್ಟು ಎಣ್ಣೆ ಸವರಿ ಅದರ ಮೇಲೆ ಕಟ್ಲೆಟ್‌ಗಳನ ಇರಿಸಿ ಕಾಯಿಸಿ. ಎರಡೂ ಬದಿಗೆ ಎಣ್ಣೆ ಹಾಕಿ ಕಾಯಿಸಿ. ಬಿಸಿ ಬಿಸಿಯಾಗಿ ಸವಿಯಿರಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಡಿಹೈಡ್ರೇಶನ್ ಅಂದ್ರೆ ಏನ್‌, ಸಮಸ್ಯೆಯಾದಾಗ ಏನ್‌ ಮಾಡಬೇಕು ಗೊತ್ತಾ

ಹಿತ್ತಲಲ್ಲಿ ಸಿಗುವ ಪೇರಳೆ ಹಣ್ಣಿನ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು ನಿಮಗೆ ಗೊತ್ತಾ

ಬೆನ್ನು ನೋವಿನ ಸಮಸ್ಯೆಯಿದ್ದರೆ ಬೆಡ್ ಬದಲು ನೆಲದಲ್ಲಿ ಮಲಗಬಹುದೇ

ನಿಮ್ಮ ಮಕ್ಕಳಲ್ಲಿ ಕಾಡುತ್ತಿರುವ ತಲೆನೋವು ಈ ಕಾರಣದಿಂದಾಗಿರಬಹುದು

ದಿನದಲ್ಲಿ ಒಂದು ಬಾರಿ ಎಬಿಸಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments