Publish Date: Wed, 01 Aug 2018 (15:10 IST)
Updated Date: Wed, 01 Aug 2018 (15:15 IST)
ಬೆಂಗಳೂರು: ಅಡುಗೆ ಮಾಡುವುದಕ್ಕೇ ತರಕಾರಿ ಇಲ್ಲವೆಂದಾಗ ತಲೆಬಿಸಿ ಮಾಡಿಕೊಳ್ಳಬೇಡಿ. ಮನೆಯಲ್ಲಿ ಮೆಂತೆ ಇದ್ದರೆ ರುಚಿಯಾದ ಮೆಂತೆ ತಂಬುಳಿಯನ್ನು ಮಾಡಬಹುದು. ಇದನ್ನು ಸೇವಿಸಿದರೆ ಜೀವಕ್ಕೂ ತಂಪು, ಆರೋಗ್ಯಕ್ಕೂ ಹಿತಕರ. ಮಾಡುವ ವಿಧಾನ ಇಲ್ಲಿದೆ ನೋಡಿ
ಬೇಕಾಗುವ ಸಾಮಗ್ರಿಗಳು
ಮೆಂತೆ:ಅರ್ಧ ಚಮಚ
ತೆಂಗಿನ ಕಾಯಿ ತುರಿ:ಅರ್ಧ ಕಪ್
ಮಜ್ಜಿಗೆ:ಎರಡು ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಒಗ್ಗರಣೆಗೆ
ಎಣ್ಣೆ :1/2ಚಮಚ
ಜೀರಿಗೆ:ಕಾಲು ಚಮಚ
ಕೆಂಪು ಮೆಣಸು :2
ಕರಿಬೇವು :5 ಎಸಳು
ಮಾಡುವ ವಿಧಾನ :
ಮೊದಲು ಮೆಂತೆಯ ಕಾಳುಗಳನ್ನು ಹದವಾಗಿ ಹುರಿದುಕೊಂಡು, ತೆಂಗಿನಕಾಯಿ ತುರಿಯ ಜತೆ ರುಬ್ಬಿಕೊಳ್ಳಿ. ನಂತರ ಇದಕ್ಕೆ ಮಜ್ಜಿಗೆ,ಉಪ್ಪು ಹಾಕಿ ಕಲಸಿ. ಆಮೇಲೆ ಒಗ್ಗರಣೆ ತಯಾರಿಸಿಕೊಂಡು ಮಿಶ್ರಣಕ್ಕೆ ಹಾಕಿ. ಅನ್ನದ ಜತೆ ಸವಿಯಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ