Publish Date: Sun, 14 Oct 2018 (16:48 IST)
Updated Date: Sun, 14 Oct 2018 (16:51 IST)
ಬೆಂಗಳೂರು : ಕ್ಯಾಪ್ಸಿಕಂ ಅಂದರೆ (ದೊಡ್ಡ ಮೆಣಸಿನಕಾಯಿ) ಕೇವಲ ನೋಡಲು ಅಷ್ಟೇ ಸುಂದರವಾಗಿಲ್ಲ ಇದರ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಉಪಯೋಗಗಳು ಕೂಡ ಇವೆ. ಬಹಳ ಉಪಯೋಗಕಾರಿಯಾದ ಈ ಕ್ಯಾಪ್ಸಿಕಂನಿಂದ ಸೂಪ್ ಮಾಡಿ ಕೂಡಿದರೆ ಇನ್ನೂ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು :
ಎರಡು ಕೆಂಪು ದಪ್ಪ ಮೆಣಸಿನಕಾಯಿ, 1ಟೇಬಲ್ ಚಮಚ ಅಡುಗೆ ಎಣ್ಣೆ, 4 ಟೊಮೇಟೋ (ನಾಲ್ಕರಿಂದ ಐದು ತುಂಡುಗಳಾಗಿ ಮಾಡಿರಬೇಕು), ಲವಂಗದ ಎಲೆ – 2, ನೀರು – 3 ಕಪ್, ಹಾಲು – 1/2 ಕಪ್, ಕಾರ್ನ್ ಫ್ಲೋರ್ – 1/2 ಟೇಬಲ್ ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಸಕ್ಕರೆ – ಒಂದು ಚಿಟಕಿ, ಕರಿ ಮೆಣಸು – ಒಂದು ಚಿಟಕಿ ಅಲಂಕಾರಕ್ಕಾಗಿ
ತಾಜಾ ದಪ್ಪ ಮೆಣಸಿನಕಾಯಿಯನ್ನು ತೆಗೆದುಕೊಂಡು ಎಲ್ಲಾ ಕಡೆ ಎಣ್ಣೆ ಹಚ್ಚಿ ಫೋರ್ಕ್ ಗೆ ಚುಚ್ಚಿ ಗ್ಯಾಸ್ ಒಲೆಯ ಮೇಲೆ ಕಪ್ಪು ಬಣ್ಣ ತಿರುಗುವವರೆಗೆ ಅದನ್ನು ಸುಡಬೇಕು. ನಂತರ ಒಂದು ಬೌಲ್ ನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಸುಟ್ಟ ದಪ್ಪ ಮೆಣಸಿನಕಾಯನ್ನು ಅದ್ದಬೇಕು. ನಿಮ್ಮ ಕೈಗಳಿಂದ ಕಪ್ಪಗಾದ ಭಗವನ್ನು ತೆಗೆಯಬೇಕು.
ದಪ್ಪ ತಳದ ಬಾಣಲೆ ತೆಗೆದುಕೊಂಡು ಹಣ್ಣಾದ ಟೊಮೇಟೋವನ್ನು ಹಾಕಿ. ಅದಕ್ಕೆ ಲವಂಗದ ಎಲೆ, ನೀರು, ದಪ್ಪ ಮೆಣಸಿನಕಾಯಿಯ ತುಂಡುಗಳನ್ನು ಬಾಣಲಿಯಲ್ಲಿ ಹಾಕಿ. ಚೆನ್ನಾಗಿ ಬೇಯಿಸಬೇಕು. ನಂತರ ಒಲೆಯನ್ನು ಆರಿಸಿ. ತಣ್ಣಗಾಗಲು ಬಿಡಿ. ನಂತರ ಅದನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಒಂದು ಪಾತ್ರೆಯನ್ನು ತೆಗೆದುಕೊಂಡು ರುಬ್ಬಿದ ಮಿಶ್ರಣವನ್ನು ಸುರಿದು ಕುದಿಯಲು ಬಿಡಿ. ತಣ್ಣಗಿನ ಹಾಲಿಗೆ ಕಾರ್ನ್ ಫ್ಲೋರ್ ಅನ್ನು ಮಿಶ್ರಣ ಮಾಡಿ ನಿಧಾನವಾಗಿ ಕುದಿಯುತ್ತಿರುವ ಸೂಪಿನ ಮಿಶ್ರಣಕ್ಕೆ ಸುರಿದು ಕಲಕ್ಕುತ್ತಲೇ ಇರಬೇಕು. ಇಲ್ಲವಾದ್ದಲ್ಲಿ ಕಾರ್ನ್ ಫ್ಲೋರ್ ತುಂಬಾ ಜಿಗಿಯಾಗಿ ಬಿಡುತ್ತದೆ. ಸೂಪಿನ ರುಚಿ ನೋಡಿ. ಹುಳಿ ಅನಿಸಿದರೆ, ಸ್ವಲ್ಪವೇ ಸಕ್ಕರೆಯನ್ನು ಸೇರಿಸಿ. ಸ್ವಲ್ಪ ಹೊತ್ತು ಕುದಿಯಲು ಬಿಡಿ. ಸರಿಯಾದ ಹದ ಬಂದ ಕೂಡಲೆ ಸೂಪ್ ಬೌಲ್ ಗೆ ಸುರಿಯಿರಿ. ಈಗ ನಿಮ್ಮ ರೋಸ್ಟೆಡ್ ಕ್ಯಾಪ್ಸಿಕಮ್ ಸೂಪ್ ತಯಾರಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
pavithra
Publish Date: Sun, 14 Oct 2018 (16:48 IST)
Updated Date: Sun, 14 Oct 2018 (16:51 IST)