Select Your Language

Notifications

webdunia
webdunia
webdunia
webdunia

ಅಪರೇಶನ್ ಅಲುಮೇಲಮ್ಮ ಖ್ಯಾತಿಯ ನಟ ರಿಷಿ ಮೇಲೆ ಹಲ್ಲೆ ಆರೋಪ

ಅಪರೇಶನ್ ಅಲುಮೇಲಮ್ಮ  ಖ್ಯಾತಿಯ ನಟ ರಿಷಿ ಮೇಲೆ ಹಲ್ಲೆ ಆರೋಪ
ಬೆಂಗಳೂರು , ಭಾನುವಾರ, 14 ಅಕ್ಟೋಬರ್ 2018 (15:29 IST)
ಬೆಂಗಳೂರು : ಕನ್ನಡ ಕಿರುತೆರೆ ಹಾಗೂ ಸಿನಿಮಾದಲ್ಲಿ ನಟಿಸಿದ ಯುವನಟರೊಬ್ಬರು ತಮ್ಮ ವಿಕಲಚೇತನ ಚಿಕ್ಕಮ್ಮನ ಮೇಲೆ ಹಲ್ಲೆ ಮಾಡಿ ಬೆದರಿಕೆಯೊಡ್ಡಿದ ಆರೋಪ ಕೇಳಿಬಂದಿದೆ.


ಸ್ಯಾಂಡಲ್ ವುಡ್ ನ ಅಪರೇಶನ್ ಅಲುಮೇಲಮ್ಮ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ  ನಟ ಮೋನಿಷ್ ರಿಷಿ ಅವರು ಆಸ್ತಿಗಾಗಿ ತನ್ನ ವಿಕಲಚೇತನ ಚಿಕ್ಕಮ್ಮನ ಕತ್ತು ಹಿಸುಕಿ ದರ್ಪ ತೋರಿದ್ದಲ್ಲದೇ ಮಚ್ಚು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ನಟ ರಿಷಿ ಹಾಗೂ ಆತನ ತಂದೆ ತಾಯಿ ತಾತನ ಮನೆಯಲ್ಲಿ ವಾಸವಾಗಿದ್ದು, ಅವರ ವಿಕಲಚೇತನ ಚಿಕ್ಕಮ್ಮ ಶಾಲಿನಿ ತಮ್ಮ ತಂದೆಯನ್ನು ನೋಡಲು ಬಂದಾಗ ಸ್ಟಾಂಪ್ ಪೇಪರ್ ಗೆ ಸಹಿ ಮಾಡಿ ಒಳಗೆ ಬರುವಂತೆ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾರಂತೆ. ಅಷ್ಟೇ ಅಲ್ಲದೇ  ಆಸ್ತಿ ಪತ್ರಕ್ಕೆ ಸಹಿ ಮಾಡದಿದ್ದರೆ ಬೆಂಕಿ ಹಚ್ಚಿ ಸುಡುವುದಾಗಿ ಬೆದರಸಿದ್ದಾರಂತೆ. ಈ ಹಿನ್ನಲೆಯಲ್ಲಿ ನಟ ರಿಷಿಯ ವಿರುದ್ಧ ಬಸವೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

'ಮಿ ಟೂ' ನಲ್ಲಿ ನಟಿ ಖುಷ್ಬು ರವಿಚಂದ್ರನ್ ಬಗ್ಗೆ ಹೇಳಿದ್ದೇನು ಗೊತ್ತಾ?