Publish Date: Sun, 14 Oct 2018 (07:00 IST)
Updated Date: Sun, 14 Oct 2018 (07:01 IST)
ಬೆಂಗಳೂರು : ಮಹಿಳೆಯರು ತಮ್ಮ ಜೀವನದಲ್ಲಿ ನಡೆದ ಲೈಂಗಿಕ ಕಿರುಕುಳದ ಘಟನೆಗಳನ್ನು ಬಹಿರಂಗಪಡಿಸಲು ವೇದಿಕೆಯಂತಿರುವ ಮೀಟೂ(#MeToo) ಅಭಿಯಾನಕ್ಕೆ ಇದೀಗ ನಟ ಚೇತನ್ ಅವರು ಬೆಂಬಲ ಸೂಚಿಸಿದ್ದಾರೆ.
ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುತ್ತಿರೋ ಲೈಂಗಿಕ ಕಿರುಕುಳದ ಆರೋಪಗಳನ್ನು ತನಿಖೆ ಮಾಡಿ ನ್ಯಾಯ ಕೊಡಿಸೋ ಆಲೋಚನೆಯಿಂದಾಗಿ ಚೇತನ್ ಹಾಗೂ ತಂಡದವರು ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ ಸಂಸ್ಥೆಯ ಜೊತೆ ಸೇರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ.
ಈ ಮೂಲಕ ವಾಣಿಜ್ಯ ಮಂಡಳಿಗೆ ಬರೋ ದೂರುಗಳನ್ನು ಇಂಟರ್ನಲ್ ಕಂಪ್ಲೈನ್ಟ್ ಕಮಿಟಿಗೆ (ಐಸಿಸಿ) ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ. ಚೇತನ್ ಅವರ ಮನವಿಯನ್ನು ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡ ಸ್ವೀಕರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.