Select Your Language

Notifications

webdunia
webdunia
webdunia
webdunia

ನೀವು ದಿನ ಏಲಕ್ಕಿ ತಿನ್ನುತ್ತಿದ್ದೀರಾ…?

ನೀವು  ದಿನ ಏಲಕ್ಕಿ ತಿನ್ನುತ್ತಿದ್ದೀರಾ…?
ಬೆಂಗಳೂರು , ಭಾನುವಾರ, 14 ಅಕ್ಟೋಬರ್ 2018 (12:20 IST)
ಬೆಂಗಳೂರು : ಏಲಕ್ಕಿಯಿಂದ ರೋಗನಿರೋಧಕ ಶಕ್ತಿ, ಜೀರ್ಣ ಶಕ್ತಿ ವೃದ್ಧಿಸುವ ಜತೆಗೆ ಆರೋಗ್ಯಕ್ಕೆ ಉತ್ತಮ ಎಂದು ಸಾಕಷ್ಟು ಉಪಯೋಗಗಳಿವೆ. ಆದರೆ ಏಲಕ್ಕಿಯಿಂದಲೂ ಅನೇಕ ಅಡ್ಡಪರಿಣಾಮ ಆಗುವ ಸಂಭವ ಕೂಡ ಇದೆ. ಕೆಲವರಿಗೆ ಏಲಕ್ಕಿ ಜಗಿಯುವ ಹವ್ಯಾಸವಿರುತ್ತದೆ. ಆದರೆ ಲೆಕ್ಕಕ್ಕಿಂತ ಅಧಿಕ ಏಲಕ್ಕಿ ಸೇವಿಸಿದರೆ ಅನೇಕ ದುಷ್ಟಪರಿಣಾಮ ಎದುರಿಸಬೇಕಾಗುತ್ತದೆ.


ಅಲರ್ಜಿ ಸಮಸ್ಯೆ: ಏಲಕ್ಕಿಯನ್ನು ದೀರ್ಘ ಸಮಯದಿಂದ ಅಥವಾ ಅಧಿಕವಾಗಿ ಉಪಯೋಗಿಸಿದರೆ ಚರ್ಮದ ಅಲರ್ಜಿ ಸಮಸ್ಯೆ ಕಾಡುತ್ತದೆ. ಜತೆಗೆ ಎದೆ ನೋವು, ಗಂಟಲು ಸಮಸ್ಯೆ ಬರಬಹುದು. ಆರಾಮದಾಯಕವಾಗಿ ಇರಲಾರದು. ಉಸಿರಾಟದ ತೊಂದರೆ ಹೆಚ್ಚಾಗುತ್ತದೆ.


ಪಿತ್ತಕೋಶದ ತೊಂದರೆ: ಮಿತಿಗಿಂತ ಅಧಿಕ ಏಲಕ್ಕಿ ಸೇವನೆ ಪಿತ್ತಕೋಶದಲ್ಲಿ ಕಲ್ಲಿನ ಸಮಸ್ಯೆಗೆ ಕಾರಣವಾಗುತ್ತದೆ. ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ಈ ಮಾಹಿತಿ ತಿಳಿದುಬಂದಿದೆ. ಜೀರ್ಣಕ್ರಿಯೆ ಸರಿಯಾದ ರೀತಿಯಲ್ಲಿ ಆಗದೆ ಇದ್ದರೆ ಪಿತ್ತಕೋಶದಲ್ಲಿ ಕಲ್ಲುಗಳು ಬೆಳೆಯಲಾರಂಭಿಸುತ್ತವೆ. ನೀವು ಈಗಾಗಲೇ ಪಿತ್ತಕೋಶದ ತೊಂದರೆಯಿಂದ ಬಳಲುತ್ತಿದ್ದಲ್ಲಿ, ಏಲಕ್ಕಿ ಸೇವನೆ ತಕ್ಷಣ ನಿಲ್ಲಿಸಿ.


ಈ ಔಷಧಿ ಸೇವಿಸುವವರು ಏಲಕ್ಕಿಯಿಂದ ದೂರವಿರಿ: ಹೆಚ್​ಐವಿ,  ಪಿತ್ತಕೋಶದ ಸಮಸ್ಯೆ, ಖಿನ್ನತೆ, ಪದೇ ಪದೇ ಮಲ-ಮೂತ್ರ ಹೋಗುವ ಸಮಸ್ಯೆ ಹಾಗೂ ರಕ್ತ ಹೆಪ್ಪುಗಟ್ಟುವ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿರುವವರು ಏಲಕ್ಕಿ ಬಳಕೆಯಿಂದ ಆದಷ್ಟು ದೂರವಿರಿ. ಈ ಸಂದರ್ಭ ಏಲಕ್ಕಿ ಸೇವಿಸಿದರೆ ಗಂಭೀರವಾದ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಏನಾದರೂ ಇದನ್ನು ಕಡೆಗಣಿಸಿದರೆ, ನೀವು ಸೇವಿಸುವ ಔಷಧಿಯಿಂದಲೇ ತೊಂದರೆಗೆ ಒಳಗಾಗುವಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಹಿತ್ತಲಲ್ಲೇ ಸಿಗುವ ಈ ಹಣ್ಣುಗಳಿಂದ ತೂಕ ಕಳೆದುಕೊಳ್ಳಬಹುದು!