Publish Date: Tue, 09 Jan 2018 (07:45 IST)
Updated Date: Tue, 09 Jan 2018 (07:51 IST)
ಬೆಂಗಳೂರು : ಸಾಮಾನ್ಯವಾಗಿ 80%ಕ್ಕಿಂತಲೂ ಅಧಿಕ ಜನರು ಪ್ರತಿನಿತ್ಯ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದ್ರೆ ಬಿಸಿ ನೀರಿಗೆ ಈ ಲವಣವನ್ನು ಮಿಕ್ಸ್ ಮಾಡಿ ಸ್ನಾನ ಮಾಡಿದ್ರೆ ಮುಖದ ಅಂದ ಇನ್ನಷ್ಟು ಕಾಂತಿಯುತವಾಗಿ ಕಾಣುತ್ತದೆ.
ಸ್ನಾನಕ್ಕೂ ಮೊದಲು ಬಿಸಿ ನೀರಿಗೆ 2 ಚಮಚ ಎಪ್ಸಂ ಸಾಲ್ಟ್ ಮಿಕ್ಸ್ ಮಾಡಿ ಒಂದೆರಡು ನಿಮಿಷ ಹಾಗೆ ಬಿಟ್ಟು ಆನಂತರ ಸ್ನಾನ ಮಾಡಿ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ ಜೊತೆಗೆ ಶರೀರದ ಮೃತ ಕಣಗಳನ್ನು ಇದು ತೊಲಗಿಸುತ್ತದೆ. ಹಾಗೆ ಇದರಿಂದ ಯಾವುದೇ ಸ್ಕಿನ್ ಪ್ರಾಬ್ಲಮ್ ಬರುವುದಿಲ್ಲ.
ಎಪ್ಸಂ ಸಾಲ್ಟ್ ನ್ನು ಬಿಸಿ ನೀರಿಗೆ ಹಾಕುವುದರಿಂದ ಅದು ಬೇಗ ಕರಗಿಹೊಗುತ್ತದೆ. ಅಲ್ಲದೆ ಇದರಲ್ಲಿ ಮೆಗ್ನಿಶಿಯಂ ಅಣುಗಳಿರುವುದರಿಂದ ದೇಹದ ಮೇಲೆ ನೇರ ಪರಿಣಾಮ ಬೀರಿ ಚರ್ಮದಲ್ಲಿರುವ ಸತ್ತ ಕಣಗಳನ್ನು ಹೊರಹಾಕಿ ಮೈಬಣ್ಣವನ್ನು ಕಾಂತಿಯುತವಾಗಿಸುತ್ತದೆ. ಹಾಗೆ ಮೈಕೈ ನೋವು ಇದ್ದರೆ ಟಬ್ ನಲ್ಲಿ 2-3 ಚಮಚ ಎಪ್ಸಂ ಸಾಲ್ಟ್ ನ್ನು ಹಾಕಿ ಸ್ನಾನ ಮಾಡಿದರೆ ನೋವು ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ