ಮೊದಲು ರವಾದ ಜೊತೆ ಅಕ್ಕಿಹಿಟ್ಟು, ಮೈದಾ, ಸಕ್ಕರೆ, ಉಪ್ಪು ಮತ್ತು ಮೊಸರನ್ನು ಹಾಕಿ ಕಲೆಸಬೇಕು. ನಂಕರ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಕಲೆಸಿ 20 ನಿಮಿಷ ಹಾಗೆಯೇ ಇಡಬೇಕು. ನಂತರ ತವಾದ ಮೇಲೆ ದೋಸೆ ಹಾಕಿ ಅದರೆ ಮೇಲೆ ಸಣ್ಣದಾಗಿ ಕಟ್ ಮಾಡಿರುವ ಈರುಳ್ಳಿ, ಕ್ಯಾಪ್ಸಿಕಂ, ಕೊತ್ತಂಬರಿ, ಕ್ಯಾರೆಟ್ ತುರಿಯನ್ನು ಹಾಕಿ ದೋಸೆಯನ್ನು ತಿರುವಿ ಹಾಕಿ ಚೆನ್ನಾಗಿ ಎರಡೂ ಕಡೆ ಬೇಯಿಸಿದರೆ ರುಚಿರುಚಿಯಾದ ರವಾ ಉತ್ತಪ್ಪ ಸವಿಯಲು ಸಿದ್ಧ. ಈ ಉತ್ತಪ್ಪವು ಕಾಯಿ ಚಟ್ನಿಯೊಂದಿಗೆ ತಿನ್ನಲು ಬಹಳ ರುಚಿಯಾಗಿರುತ್ತದೆ.