Select Your Language

Notifications

webdunia
webdunia
webdunia
webdunia

ಸೇಬು ಹಣ್ಣಿನ ಕೊಬ್ಬರಿ ಮಿಠಾಯಿ

ಸೇಬು ಹಣ್ಣಿನ ಕೊಬ್ಬರಿ ಮಿಠಾಯಿ
ಬೆಂಗಳೂರು , ಸೋಮವಾರ, 15 ಅಕ್ಟೋಬರ್ 2018 (18:31 IST)
ಸೇಬು ಹಣ್ಣನ್ನು ಯಾರು ತಿಂದಿರುವುದಿಲ್ಲ ಹೇಳಿ.. ಪ್ರತಿದಿನ ಸೇಬನ್ನು ತಿನ್ನುವುದರಿಂದ ವೈದ್ಯರನ್ನೇ ದೂರವಿಡಬಹುದು ಎಂಬ ಮಾತಿದೆ. ಇದರಿಂದ ರುಚಿಯಾದ ಕೊಬ್ಬರಿ ಮಿಠಾಯಿಯನ್ನೂ ಸಹ ತಯಾರಿಸಬಹುದು. ಮತ್ತು ಸೇಬು ಹಣ್ಣಿನಿಂದ ತಯಾರಿಸಿದ ಮಿಠಾಯಿಯನ್ನು ತಿನ್ನುವಾಗ ಸೇಬಿನ ರಸ ಬರುವುದರಿಂದ ಮಕ್ಕಳಿಗೆ ಸಾಯಂಕಾಲದ ವೇಳೆಯಲ್ಲಿ ತಿನ್ನಲು ಕೊಡಬಹುದು.  ಈ ಮಿಠಾಯಿ ಆರೋಗ್ಯಕ್ಕೂ ಒಳ್ಳೆಯದಪ. ಹಾಗಾದರೆ ಅದನ್ನು ಹೇಗೆ ತಯಾರಿಸುವುದು ಅಂತ ತಿಳಿಸಿಕೊಡುತ್ತೇವೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ.
ತಯಾರಿಸಲು ಬೇಕಾಗುವ ಸಾಮಗ್ರಿಗಳು :
 
* 3 ಕಪ್ ತೆಂಗಿಕಾಯಿ ತುರಿ
* 2 ಕಪ್ ಸಕ್ಕರೆ
* 2 ಸೇಬು ಹಣ್ಣು (ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು.)
* 1 ಚಮಚ ಏಲಕ್ಕಿ ಪುಡಿ
* 4 ಟೀ ಚಮಚ ತುಪ್ಪ
* ಅಲಂಕಾರಕ್ಕೆ ಸ್ವಲ್ಪ ಪಿಸ್ತಾ
 
ತಯಾರಿಸುವ ವಿಧಾನ :
 
  ಒಂದು ದಪ್ಪ ತಳದ ಪಾತ್ರೆಯಲ್ಲಿ ಸೇಬು ಹಣ್ಣಿನ ರಸ, ಸಕ್ಕರೆ. ತುಪ್ಪ ಮತ್ತು ತೆಂಗಿನ ತುರಿಯನ್ನು ಹಾಕಿ ಮಧ್ಯಮ ಗಾತ್ರದ ಉರಿಯಲ್ಲಿ ಕೈಯಾಡಿಸುತ್ತಾ ಇರಬೇಕು. (ಬೇಕಿದ್ದರೆ ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬಹುದು.) ಈ ಮಿಶ್ರಣ ಗಟ್ಟಿಯಾಗುತ್ತಾ ಬರುವಾಗ ಏಲಕ್ಕಿ ಪುಡಿಯನ್ನು ಹಾಕಬೇಕು. ನಂತರ ಈ ಮಿಶ್ರಣವು ಬಾಣಲೆ ಬಿಟ್ಟು ಬರುವಾಗ ಆದನ್ನು ತುಪ್ಪ ಸವರಿದ ತಟ್ಟೆಗೆ ಹಾಕಬೇಕು. ಅದನ್ನು ಸಮತಟ್ಟು ಮಾಡಬೇಕು. ಈ ಮಿಶ್ರಣದ ಮೇಲೆ ಪಿಸ್ತಾವನ್ನು ಹಾಕಿ ಅಲಂಕರಿಸಿ 5 ನಿಮಿಷಗಳ ನಂತರ ಚೌಕಾಕಾರವಾಗಿ ಕತ್ತರಿಸಿದರೆ ರುಚಿರುಚಿಯಾದ ಸೇಬು ಹಣ್ಣಿನ ಕೊಬ್ಬರಿ ಮಿಠಾಯಿ ಸವಿಯಲು ಸಿದ್ಧ. 

Share this Story:

Follow Webdunia kannada

ಮುಂದಿನ ಸುದ್ದಿ

ಮಿಶ್ರ ತರಕಾರಿಗಳ ಅಕ್ಕಿ ರೊಟ್ಟಿ