Webdunia - Bharat's app for daily news and videos

Install App

ಪನ್ನೀರ್-ಚಿಕನ್ ಮಸಾಲಾ

ಅತಿಥಾ
ಗುರುವಾರ, 25 ಜನವರಿ 2018 (15:55 IST)
ಅಗತ್ಯವಿರುವ ಸಾಮಾಗ್ರಿಗಳು
 
ಕೋಳಿಮಾಂಸ : ಅರ್ಧ ಕೇಜಿ
ಪನ್ನೀರ್ : 100 ಗ್ರಾಂ 
ಟೊಮೇಟೊ ಪ್ಯೂರಿ: ಅರ್ಧ ಕಪ್
ಈರುಳ್ಳಿ ಪ್ಯೂರಿ: ಅರ್ಧ ಕಪ್
ಸಣ್ಣದಾಗಿ ಕತ್ತರಿಸಿದ ಈರುಳ್ಳಿ - ಅರ್ಧ ಕಪ್
ಗರಂ ಮಸಾಲ - 2 ಚಿಕ್ಕ ಚಮಚ
ಕೆಂಪು ಮೆಣಸಿನ ಪುಡಿ - 1 ಚಮಚ
ಧನಿಯ ಪುಡಿ - 1/2 ಚಮಚ
ಹಸಿಮೆಣಸು - 6-7 
ಸಾಸಿವೆ- 1/4th ಚಿಕ್ಕ ಚಮಚ
ಎಣ್ಣೆ
ಲಿಂಬೆ ರಸ - 2 ಚಿಕ್ಕ ಚಮಚ
ಉಪ್ಪು: ರುಚಿಗನುಸಾರ
 
ಮಾಡುವ ವಿಧಾನ: 
- ಒಂದು ದಪ್ಪತಳದ ಬಾಣಲೆಯಲ್ಲಿ ಕೊಂಚ ಎಣ್ಣೆ ಹಾಕಿ ಬಿಸಿಮಾಡಿ. ಇದರಲ್ಲಿ ಪನ್ನೀರ್ ತುಂಡುಗಳನ್ನು ಹಾಕಿ ಎಲ್ಲಾ ಬದಿಗಳು ಕಂದು ಬಣ್ಣ ಬರುವಷ್ಟು ಹುರಿಯಿರಿ. ಬಳಿಕ ಪನ್ನೀರ್ ತುಂಡುಗಳನ್ನು ಇನ್ನೊಂದು ಪಾತ್ರೆಯಲ್ಲಿ ಬದಿಗಿಡಿ 
- ಬಳಿಕ ಇದೇ ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಬಳಿಕ ಈರುಳ್ಳಿ ಮತ್ತು ಹಸಿಮೆಣಸು ಹಾಕಿ ಈರುಳ್ಳಿ ಕೊಂಚ ಕೆಂಪು ಬಣ್ಣ ಬರುವವರೆಗೆ ಹುರಿಯಿರಿ.
- ಈಗ ಟೊಮೇಟೋ ಪ್ಯೂರಿ, ಈರುಳ್ಳಿ ಪ್ಯೂರಿ, ಗರಂ ಮಸಾಲೆ ಪುಡಿ, ಮೆಣಸಿನ ಪುಡಿ, ಧನಿಯ ಪುಡಿ ಹಾಕಿ ಹುರಿಯಿರಿ. 
- ಇದರಿಂದ ಕೊಂಚ ಎಣ್ಣೆ ಬಿಡುತ್ತಿದ್ದಂತೆಯೇ ಪನ್ನೀರ್ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ 
- ಬಳಿಕ ಕೋಳಿಮಾಂಸದ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ ಉಪ್ಪು ಸೇರಿಸಿ ಇದರ ಮೇಲೆ ಲಿಂಬೆರಸ ಸೇರಿಸಿ ಚಿಕ್ಕ ಉರಿಯಲ್ಲಿ ಕೋಳಿ ಮಾಂಸ ಬೇಯುವವರೆಗೆ ನಡುನಡುವೆ ತಿರುವುತ್ತಾ ಹುರಿಯಿರಿ. 
- ಈ ಸಾರು ರೊಟ್ಟಿ ಮತ್ತು ಅನ್ನದೊಂದಿಗೆ ಸೇವಿಸಲು ತುಂಬಾ ರುಚಿಯಾಗಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments