Select Your Language

Notifications

webdunia
webdunia
webdunia
webdunia

ಗ್ರೀನ್ ಚಿಲ್ಲಿ ಚಿಕನ್

ಗ್ರೀನ್ ಚಿಲ್ಲಿ ಚಿಕನ್

ಅತಿಥಾ

ಬೆಂಗಳೂರು , ಗುರುವಾರ, 25 ಜನವರಿ 2018 (12:22 IST)
ಅಗತ್ಯವಾದ ಪದಾರ್ಥಗಳು 
 
ಕೋಳಿ ಮಾಂಸ - 1 ಕೆ.ಜಿ 
ಹಸಿ ಮೆಣಸಿನಕಾಯಿಗಳು- 1 ಚಿಕ್ಕ ಕಪ್
ಈರುಳ್ಳಿ - 2 (ಸೀಳಾಗಿ ಹೆಚ್ಚಿದ್ದು) 
ಬೆಳ್ಳುಳ್ಳಿ - 10 ತುಂಡು
ಶುಂಠಿ - 1 ಮಧ್ಯಮ ಗಾತ್ರದ್ದು 
ತಾಜಾ ಕೊತ್ತಂಬರಿ ಸೊಪ್ಪು - 1 ಕಪ್ (ಹೆಚ್ಚಿದ್ದು)
ರುಚಿಗೆ ತಕ್ಕಷ್ಟು ಉಪ್ಪು
ಅರಿಶಿನಪುಡಿ - 1 ಟೀ. ಚಮಚ
ಕೊತ್ತೊಂಬರಿ ಪುಡಿ- 2 ಟೀ. ಚಮಚ 
ಜೀರಿಗೆ ಪುಡಿ- 1 ಟೀ. ಚಮಚ
ಗರಂ ಮಸಾಲ - 1ಟೀ. ಚಮಚ 
ಜೀರಿಗೆ - 1 ಟೀ. ಚಮಚ
ಎಣ್ಣೆ- 3 ಟೀ. ಚಮಚ
ಮಾಡುವ ವಿಧಾನ
 
- ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನಕಾಯಿಗಳನ್ನು ಸ್ವಲ್ಪ ನೀರು ಮತ್ತು ಉಪ್ಪಿನ ಜೊತೆಗೆ ಪೇಸ್ಟ್ ರೀತಿ ರುಬ್ಬಿಕೊಳ್ಳಿ.
- ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದುಕೊಳ್ಳಿ ಮತ್ತು ಅವುಗಳನ್ನು ಅರ್ಧ ಗಂಟೆಗಳ ಕಾಲ ಈ ಮಿಶ್ರಣದಲ್ಲಿ ಮೆರಿನೇಟ್ ಮಾಡಿ
- ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ ಮತ್ತು ಅದರಲ್ಲಿ ಜೀರಿಗೆಯನ್ನು ಹಾಕಿ ಕೆಲ ನಿಮಿಷಗಳ ಕಾಲ ಉರಿಯಿರಿ.
- ಈಗ ಕೋಳಿ ಮಾಂಸವನ್ನು ಮಧ್ಯಮ ಗಾತ್ರದ ಉರಿಯಲ್ಲಿ 6-7 ನಿಮಿಷಗಳ ಕಾಲ ಹುರಿಯಿರಿ.
- ನಂತರ ಇದಕ್ಕೆ ಕೊತ್ತೊಂಬರಿ ಪುಡಿ, ಹುರಿದ ಜೀರಿಗೆ ಪುಡಿ, ಅರಿಶಿನ ಪುಡಿ ಮತ್ತು ಗರಂ ಮಸಾಲ ಪುಡಿಯನ್ನು ಹಾಕಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ, 3-4 ನಿಮಿಷಗಳ ಕಾಲ ಬೇಯಿಸಿ.
- ಈಗ ಕೋಳಿ ಮಾಂಸವಿರುವ ಪಾತ್ರೆಯನ್ನು ಒಂದು ಮುಚ್ಚಳದ ನೆರವಿನಿಂದ ಮುಚ್ಚಿ, ಕಡಿಮೆ ಉರಿಯಲ್ಲಿ 10-15 ನಿಮಿಷಗಳ ಕಾಲ ಬೇಯಿಸಿ. ಆಗಾಗ ಇದನ್ನು ತಿರುವಿ ಕೊಡಿ. 
- ಗ್ರೀನ್ ಚಿಲ್ಲಿ ಚಿಕನ್ ಸಿದ್ಧವಾಗಿದೆ. ಇದನ್ನು ಅನ್ನ ಮತ್ತು ರೋಟಿಗಳ ಜೊತೆಗೆ ಸವಿದು ಆನಂದಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ಆಸಕ್ತಿ ಹೆಚ್ಚು ಇರುವುದು ಮಹಿಳೆಗೋ? ಪುರುಷರಿಗೋ?!