Publish Date: Fri, 19 Jan 2018 (08:36 IST)
Updated Date: Fri, 19 Jan 2018 (08:38 IST)
ಬೆಂಗಳೂರು: ಅಡುಗೆ ಮನೆಯಲ್ಲಿ ಏನೇ ಸಿಹಿ ಇಟ್ಟರೂ ಇರುವೆ ಕಾಟ ಎಂದು ಗೊಣಗುವವರಿಗೆ ಇಲ್ಲಿದೆ ಒಂದು ಸುಲಭ ಉಪಾಯ.
ವಿನೇಗರ್
ವಿನೇಗರ್ ಮತ್ತು ನೀರು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ನಿಮ್ಮ ಅಡುಗೆ ಮನೆಯ ಕಪಾಟು, ಪಾತ್ರೆ, ಸಾಮಾನು ಇಡುವ ಜಾಗದಲ್ಲಿ ಒರೆಸಿ. ಇರುವೆಗೆ ವಿನೇಗರ್ ವಾಸನೆ ಆಗದು. ಹಾಗಾಗಿ ಖಂಡಿತಾ ಆ ಸ್ಥಳದಲ್ಲಿ ಸುಳಿಯದು!
ಸಿಟ್ರಸ್ ಸಿಪ್ಪೆಗಳು
ಕಿತ್ತಳೆ, ನಿಂಬೆ ಹಣ್ಣು, ಸೌತೆಕಾಯಿ ಸಿಪ್ಪೆಗಳು ಇದ್ದೇ ಇರುತ್ತದಲ್ಲಾ? ಇದನ್ನು ಕಸದಬುಟ್ಟಿಗೆ ಸೇರಿಸದೆ ಎತ್ತಿಡಿ. ಇರುವೆ ಬರುವ ಜಾಗದಲ್ಲಿ ಈ ಸಿಪ್ಪೆಗಳನ್ನು ಹಾಕಿ. ಇದರಲ್ಲಿರುವ ಅಂಶ ಇರುವೆಗೆ ವಿಷವಾಗಿ ಪರಿಣಮಿಸುತ್ತದೆ.
ಉಪ್ಪು
ಇರುವೆ ಬರುವ ಸಂದು ಸಂದಿನ ಜಾಗಕ್ಕೆ ಪುಡಿ ಉಪ್ಪು ಚಿಮುಕಿಸಿ. ಈ ಪುಡಿ ಉಪ್ಪು ಹರಡಿದ್ದರೆ ಇರುವೆಗೆ ಅದನ್ನು ದಾಟಿ ಬರುವುದು ಕಷ್ಟವಾಗುತ್ತದೆ. ಹಾಗಾಗಿ ಅತ್ತ ಸುಳಿಯಲಾರವು!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ