Select Your Language

Notifications

webdunia
webdunia
webdunia
webdunia

ಬೆಲ್ಲಿ ಫ್ಯಾಟ್ ಕರಗಿಸದಿರಲು ಸಾಧ್ಯವಾಗದೇ ಇರುವುದಕ್ಕೆ ಇದೂ ಕಾರಣವಾಗಿರಬಹುದು!

ಬೆಲ್ಲಿ ಫ್ಯಾಟ್ ಕರಗಿಸದಿರಲು ಸಾಧ್ಯವಾಗದೇ ಇರುವುದಕ್ಕೆ ಇದೂ ಕಾರಣವಾಗಿರಬಹುದು!
ಬೆಂಗಳೂರು , ಶುಕ್ರವಾರ, 19 ಜನವರಿ 2018 (08:30 IST)
ಬೆಂಗಳೂರು: ಬಳುಕುವ ಸೊಂಟದ ಆಸೆ ಎಲ್ಲರಿಗೂ ಇದ್ದೇ ಇರುತ್ತದಲ್ಲಾ? ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಬೆಲ್ಲಿ ಫ್ಯಾಟ್ ಕರಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆಯೇ? ಹಾಗಿದ್ದರೆ ನೀವು ಈ ತಪ್ಪುಗಳನ್ನು ಮಾಡುತ್ತಿರಬಹದು!
 

ಮೊದಲನೆಯದಾಗಿ ಸರಿಯಾದ ನಿದ್ರೆ ಎಲ್ಲಾ ಆರೋಗ್ಯ ಸಮಸ್ಯೆಗೂ ಪರಿಹಾರ ಎನ್ನುವುದನ್ನು ಮರೆಯಬೇಡಿ. ಸೌಂದರ್ಯದ ವಿಷಯದಲ್ಲೂ ಇದು ಅನ್ವಯಿಸುತ್ತದೆ. ಸರಿಯಾಗಿ ನಿದ್ರೆಯಿಲ್ಲದೇ ಇದ್ದರೆ ಒತ್ತಡ, ಆತಂಕ, ಬಳಲಿಕೆ ಆಗುವುದು ಸಹಜ. ಇದು ನಮ್ಮ ದೇಹದ ಮೇಲೂ ಪರಿಣಾಮ ಬೀರುತ್ತದೆ.

ಮೈ ಕೈಗೆ ವ್ಯಾಯಾಮ ಬೇಕೆಂದು ಎಲ್ಲಾ ಕೆಲಸಗಳನ್ನು ತಲೆ ಮೇಲೆ ಹೊತ್ತುಕೊಳ್ಳಬೇಡಿ. ವಿಪರೀತ ಕೆಲಸ ಮಾಡುತ್ತಿದ್ದರೆ ಒತ್ತಡವಾಗಬಹುದಷ್ಟೇ. ದೇಹದ ಮೈಕಟ್ಟು ಸದೃಢವಾಗದು.

ಎಲ್ಲಕ್ಕಿಂತ ಮುಖ್ಯ ನಮ್ಮ ಆಹಾರದ ಆಯ್ಕೆ. ನಿಯಮಿತವಾಗಿ, ಪೋಷಕಾಂಶಯುಕ್ತ ಆಹಾರ ಸೇವಿಸುತ್ತಿರುವುದು ಮುಖ್ಯ. ಹಾಗೆಯೇ ವಿಟಮಿನ್ ಸಿ ಅಂಶ ಹೆಚ್ಚಿರುವವ ಆಹಾರವನ್ನು ಸೇವಿಸಿ. ಹಾಗೆಯೇ ಸಾಕಷ್ಟು ನೀರು ಸೇವಿಸಿ, ಮನಸ್ಸಿಗೆ ಮುದ ಕೊಡುವ ಚಟುವಟಿಕೆಗಳನ್ನು ಮಾಡುತ್ತಿದ್ದರೆ ಬೆಲ್ಲಿ ಫ್ಯಾಟ್ ಮಾತ್ರವಲ್ಲ, ದೇಹದ ಆರೋಗ್ಯವೂ ಚೆನ್ನಾಗಿ ಆಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇರುಳುಗಣ್ಣು ಸಮಸ್ಯೆಯೇ...? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ