ಮರಬದನೆಕಾಯಿ ಸಾಂಬಾರ್

Webdunia
ಬುಧವಾರ, 13 ಮಾರ್ಚ್ 2019 (15:36 IST)
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಮರಬದನೆ 6
* ತೆಂಗಿನಕಾಯಿ 1 ಪೋಳು
* ಆಲೂಗಡ್ಡೆ 2
* ಟೊಮೆಟೊ 2
* ಒಣಮೆಣಸು 9
* ಧನಿಯಾ 2 ಚಮಚ
* ಸಾಸಿವೆ ಸ್ವಲ್ಪ
* ಉದ್ದಿನಬೇಳೆ 1 ಚಮಚ
* ಅರಿಶಿನ
* ಹುಣಸೆಹಣ್ಣು ರುಚಿಗೆ ತಕ್ಕಷ್ಟು
* ಉಪ್ಪು, ಬೆಲ್ಲ ರುಚಿಗೆ ತಕ್ಕಷ್ಟು
 
  ತಯಾರಿಸುವ ವಿಧಾನ:
 
ಮೊದಲು ಮರಬದನೆಯನ್ನು ಕಟ್ ಮಾಡಿ ಮೂರರಿಂದ ನಾಲ್ಕು ಬಾರಿ ಹಿಚುಕಿ ಬೀಡ ಹೋಗುವವರೆಗೆ ತೊಳೆದು ಬೇಯಲು ಇಡಬೇಕು. ನಂತರ ಬಾಣಲೆಯಲ್ಲಿ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಕರಿಬೇವು, ಧನಿಯಾ ಹಾಕಿ ಕೆಂಪಗೆ ಹುರಿದು ಕಾಯಿತೊರೆಯೊಂದಿಗೆ ರುಬ್ಬಿಕೊಳ್ಳಬೇಕು. ನಂತರ ಮರಬದನೆಯು ಅರ್ಧ ಬೆಂದ ಮೇಲೆ ಟೊಮೊಟೊ, ಆಲೂಗಡ್ಡೆಯನ್ನು ಕಟ್ ಮಾಡಿ ಹಾಕಿ ಅದು ಕುದಿ ಬಂದ ಮೇಲೆ ಅದಕ್ಕೆ ಅರಿಶಿನ, ಉಪ್ಪು, ಬೆಲ್ಲವನ್ನು ಹಾಕಿ ಅರೆದ ಮಿಶ್ರಣವನ್ನು ಹಾಕಿ ಕುದಿಸಬೇಕು. ಅದು ಚೆನ್ನಾಗಿ ಕುದಿದ ನಂತರ ಮರಬದನೆ ಸಾಂಬಾರ್ ಸವಿಯಲು ಸಿದ್ಧ, 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments