Webdunia - Bharat's app for daily news and videos

Install App

ಜೋಳದ ಹಿಟ್ಟು ಮತ್ತು ಬಾಳೆಹಣ್ಣಿನ ಕೇಕ್

Webdunia
ಬುಧವಾರ, 13 ಮಾರ್ಚ್ 2019 (15:33 IST)
ಈಗ ಮಾರುಕಟ್ಟೆಯಲ್ಲಿ ತರಹೇವಾರಿ ಕೇಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸಮಾರಂಭದಲ್ಲಿಯೂ ಇದೀಗ ಕೇಕ್ ಇರುವುದು ಸರ್ವೇ ಸಾಮಾನ್ಯ, ಚಾಕಲೇಟ್ ಕೇಕ್, ಬಿಸ್ಕತ್ ಕೇಕ್ ಹೀಗೆ ಕೇಕ್‌ಗಳನ್ನು ಮನೆಯಲ್ಲಿಯೇ ಶುಚಿಯಾಗಿ, ರುಚಿಯಾಗಿ ಮಾಡಿಕೊಂಡು ಸವಿಯಬಹುದು. ಅಂತಹುದರಲ್ಲಿ ಜೋಳದ ಹಿಟ್ಟು ಮತ್ತು ಬಾಳೆಹಣ್ಣನ್ನು ಬಳಸಿ ರುಚಿಕರವಾದ ಕೇಕ್ ಅನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ..
ತಯಾರಿಸಲು ಬೇಕಾಗುವ ಸಾಮಗ್ರಿಗಳು:
 
* ಜೋಳದ ಹಿಟ್ಟು 1 ಕಪ್
* ಕೆನೆ ಹಾಲು 1 ಕಪ್
* ಪಚ್ಚ ಬಾಳೆಹಣ್ಣು 1
* ಬೇಕಿಂಗ್ ಸೋಡಾ/ಅಡುಗೆ ಸೋಡಾ 1/2 ಟೀ ಚಮಚ
* ಬೆಲ್ಲ ಸ್ವಲ್ಪ
* ತುಪ್ಪ ಸ್ವಲ್ಪ
* ಸ್ವಲ್ಪ ಡ್ರೈ ಫ್ರೂಟ್ಸ್
 
 ತಯಾರಿಸುವ ವಿಧಾನ:
 
ಮೊದಲು ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ ಅದಕ್ಕೆ ಬೆಲ್ಲ, ತುಪ್ಪ, ಬೇಕಿಂಗ್ ಸೋಡಾ, ಹಾಲು ಮತ್ತು ಜೋಳದ ಹಿಟ್ಟು ಎಲ್ಲವನ್ನೂ ಹಾಕಿ ಚೆನ್ನಾಗಿ ಎರಡು ನಿಮಿಷ ಕಲೆಸಿ ಮಿಕ್ಸಿ ಮಾಡಿಕೊಳ್ಳಬೇಕು. ನಂತರ ಒಂದು ತುಪ್ಪ ಸವರಿದ ಪಾತ್ರೆಗೆ ಈ ಮಿಶ್ರಣವನ್ನು ಹಾಕಬೇಕು. ನಂತರ ಆದರ ಮೇಲೆ ಡ್ರೈ ಫ್ರುಟ್ಸ್ ಅನ್ನು ಉದುರಿಸಬೇಕು, ನಂತರ ಸ್ವಲ್ಪ ಉಪ್ಪನ್ನು ಹಾಕಿ ಕುಕ್ಕರ್‌ನಲ್ಲಿ ಹದಿನೈದು ನಿಮಿಷ ಸಣ್ಣ ಉರಿಯಲ್ಲಿ ಇಡಬೇಕು. ನಂಚರ ಇಳಿಸಿ ಅದನ್ನು ಚಾಕುವಿನಿಂದ ಅಥವಾ ಚಮಚದಿಂದ ಚುಚ್ಚಿ ನೋಡಬೇಕು. ಅದು ಅಂಟಿಲ್ಲ ಎಂದರೆ ರುಚಿಯಾದ ಸವಿಯಾದ ಬಾಳೆಹಣ್ಣು, ಜೋಳದ ಹಿಟ್ಟಿನ ಕೇಕ್ ಸವಿಯಲು ಸಿದ್ಧ. 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments