ಈರುಳ್ಳಿ ರಾಗಿ ರೊಟ್ಟಿಯನ್ನು ಮಾಡಿ ನೋಡಿ...

Webdunia
ಬುಧವಾರ, 10 ಅಕ್ಟೋಬರ್ 2018 (13:21 IST)
ರಾಗಿಯು ಆರೋಗ್ಯಕ್ಕೆ ತುಂಬಾ ಹಿತವಾದ ಧಾನ್ಯವಾಗಿದೆ. ಆದರೆ ಅದನ್ನು ಅಕ್ಕಿಯಂತೆ ಹೆಚ್ಚಾಗಿ ಬಳಸುವುದಿಲ್ಲ. ಆದ್ದರಿಂದ ಅಪರೂಪಕ್ಕೊಮ್ಮೆ ಈ ರೀತಿ ರೊಟ್ಟಿ, ದೋಸೆಯಂತಹದ್ದನ್ನು ಮಾಡಿ ತಿಂದರೆ ಆರೋಗ್ಯಕ್ಕೂ ಉತ್ತಮ. ನೀವು ಇದರೊಂದಿಗೆ ಪಾಲಾಕ್ ಹಾಗೂ ಮೆಂತೆಯಂತಹ ಸೊಪ್ಪುಗಳನ್ನೂ ಸಹ ಸೇರಿಸಿ ರೊಟ್ಟಿಯನ್ನು ತಯಾರಿಸಿಕೊಳ್ಳಬಹುದು. ಈರುಳ್ಳಿ ರಾಗಿ ರೊಟ್ಟಿಯನ್ನು ಮಾಡುವ ವಿಧಾನಕ್ಕಾಗಿ ಇಲ್ಲಿ ನೋಡಿ.
ಬೇಕಾಗುವ ಸಾಮಗ್ರಿಗಳು:
ರಾಗಿ ಹಿಟ್ಟು - 11/2 ಕಪ್
ಈರುಳ್ಳಿ - 2
ಕೊತ್ತಂಬರಿ ಸೊಪ್ಪು - ಸ್ವಲ್ಪ
ಶುಂಠಿ - 1 ಇಂಚು
ಹಸಿಮೆಣಸು - 1-2
ಉಪ್ಪು - ರುಚಿಗೆ
ಎಣ್ಣೆ - ಸ್ವಲ್ಪ
 
ಮಾಡುವ ವಿಧಾನ:
ರಾಗಿ ಹಿಟ್ಟಿಗೆ 2-3 ಚಮಚ ಎಣ್ಣೆ, ಹೆಚ್ಚಿದ ಈರುಳ್ಳಿ, ಕೊತ್ತಂಬರಿಸೊಪ್ಪು, ಹಸಿಮೆಣಸು ಮತ್ತು ಶುಂಠಿಯನ್ನು ಹಾಕಿ ಅಗತ್ಯಕ್ಕೆ ತಕ್ಕಷ್ಟು ಬಿಸಿ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟನ್ನು ರೆಡಿ ಮಾಡಿಕೊಳ್ಳಿ. ನಂತರ ಅದನ್ನು ಉಂಡೆಗಳನ್ನಾಗಿ ಮಾಡಿಕೊಂಡು ಒದ್ದೆ ಬಟ್ಟೆ ಅಥವಾ ಎಲೆಯ ಮೇಲೆ ಎಣ್ಣೆಯನ್ನು ಸವರಿದ ಕೈಯಿಂದ ಉಂಡೆಗಳನ್ನು ರೊಟ್ಟಿಯ ಆಕಾರಕ್ಕೆ ತಟ್ಟಿ ಕಾದ ತವಾದ ಮೇಲೆ ಹಾಕಿ ಎಣ್ಣೆಯನ್ನು ಸವರಿ ಎರಡೂ ಬದಿಯನ್ನು ಬೇಯಿಸಿದರೆ ಈರುಳ್ಳಿ ರಾಗಿ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ. ಇದು ಈರುಳ್ಳಿ ಚಟ್ನಿಯೊಂದಿಗೆ ಹೆಚ್ಚು ರುಚಿಯಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಮುಂದಿನ ಸುದ್ದಿ
Show comments