Publish Date: Wed, 10 Oct 2018 (08:16 IST)
Updated Date: Wed, 10 Oct 2018 (08:18 IST)
ಬೆಂಗಳೂರು: ಕೆಲವು ಅಧ್ಯಯನಗಳ ಪ್ರಕಾರ ನಮ್ಮ ದೇಶದಲ್ಲಿ ಶೇ. 79 ರಷ್ಟು ಮಂದಿ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಆದರೆ ಇದರ ಲಕ್ಷಣಗಳೇನು ಗೊತ್ತಾ?
ನಮ್ಮ ದೇಶದಲ್ಲಿ ಹೆಚ್ಚಿನವರು ವಿಟಮಿನ್ ಡಿ ಕೊರತೆಯಿಂದಾಗಿ ಮೈ ಕೈ ನೋವು, ಕೂದಲು ಉದುರುವಿಕೆ ಇತ್ಯಾದಿ ಸಮಸ್ಯೆಗೊಳಗಾಗುತ್ತಾರೆ. ಹಾಗಾಗಿ ವಿಟಮಿನ್ ಡಿ ಅಂಶವಿರುವ ಆಹಾರವನ್ನು ಹೆಚ್ಚು ಸೇವಿಸುವುದು ಉತ್ತಮ.
ಮುಖ್ಯವಾಗಿ ತಲೆಯಲ್ಲಿ ಕೂದಲು ಉದುರುತ್ತಿದ್ದರೆ, ಬೆವರುತ್ತಿದ್ದರೆ ಅದು ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರುತ್ತದೆ. ಹೀಗಾಗಿ ತಲೆಯಲ್ಲಿ ವಿಪರೀತ ಬೆವರುತ್ತಿದ್ದರೆ ಅದು ಸಾಮಾನ್ಯ ಬೆವರುವಿಕೆ ಎಂದು ಸುಮ್ಮನಾಗಬೇಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.