Daily Horoscope
✕

ಆರೋಗ್ಯಕರ ಉಪಾಹಾರಕ್ಕಾಗಿ ಓಟ್ಸ್ ಉತ್ತಪ್ಪ

Webdunia
ಶುಕ್ರವಾರ, 17 ಆಗಸ್ಟ್ 2018 (19:26 IST)
ಬೇಕಾಗುವ ಸಾಮಗ್ರಿಗಳು - 
 
2 ಕಪ್ ಓಟ್ಸ್
1 ಕಪ್ ಮೊಸರು
2 ಚಮಚ ಉಪ್ಪು
ಅಗತ್ಯವಿರುವಷ್ಟು ನೀರು
1 ಕಪ್ ಅಕ್ಕಿ ಹಿಟ್ಟು
1 ಚಮಚ ತುರಿದ ಶುಂಠಿ
1 ಹಸಿರು ಮೆಣಸಿನಕಾಯಿ ಚಿಕ್ಕದಾಗಿ ಹೆಚ್ಚಿದ್ದು
1 ಚಮಚ ಕರಿ ಮೆಣಸಿನ ಪುಡಿ
1 ಚಮಚ ಎಣ್ಣೆ
2 ಚಮಚ ಈರುಳ್ಳಿ ಸಣ್ಣದಾಗಿ ಹೆಚ್ಚಿದ್ದು
2 ಚಮಚ ತುರಿದ ಕ್ಯಾರೆಟ್
2 ಚಮಚ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ - 
 
-ಮಿಕ್ಸರ್‌ನಲ್ಲಿ ಓಟ್ಸ್ ಅನ್ನು ಪುಡಿಮಾಡಿಕೊಳ್ಳಿ (ನೀರು ಸೇರಿಸಬಾರದು)
- ಒಂದು ಬಟ್ಟಲಿಗೆ ಪುಡಿಮಾಡಿ ಓಟ್ಸ್, ಮೊಸರು, ಉಪ್ಪು ಸೇರಿಸಿ ಮಿಶ್ರಣ ಮಾಡಿ.
- ಅದಕ್ಕೆ ಸ್ವಲ್ಪ ನೀರು ಸೇರಿಸಿ ಮಿಶ್ರಣ ಮಾಡಿ.
- ಕನಿಷ್ಠ 1 ಗಂಟೆ ಕಾಲ ಅದನ್ನು ಪಕ್ಕಕ್ಕೆ ಇರಿಸಿ.
- ಒಂದು ಗಂಟೆಯ ನಂತರ, ಅದಕ್ಕೆ ಇನ್ನು ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ.
-ಈಗ ಅದಕ್ಕೆ ಅಕ್ಕಿ ಹಿಟ್ಟು ಸೇರಿಸಿ ಇನ್ನು ಸ್ವಲ್ಪ ನೀರು ಸೇರಿಸಿ ಮಿಶ್ರಣ ಮಾಡಿ.
- ಶುಂಠಿ, ಹಸಿರು ಮೆಣಸಿನಕಾಯಿ, ಕರಿಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ ( ಹಿಟ್ಟನ್ನು ಸ್ವಲ್ಪ ದಪ್ಪವಾಗಿರಿಸಬೇಕು )
- ಈಗ ತವಾಗೆ ಎಣ್ಣೆ ಸವರಿ ಬಿಸಿ ಮಾಡಿ, ಅದರ ಮೇಲೆ ಹಿಟ್ಟನ್ನು ಸುರಿದು ದೋಸೆ ರೀತಿಯಲ್ಲಿ ಮಾಡಿ
- ಅದರ ಮೇಲೆ ಈರುಳ್ಳಿ, ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ನಿಧಾನವಾಗಿ ಒತ್ತಿರಿ.
- ಸುತ್ತಲು ಎಣ್ಣೆ ಅಥವಾ ತುಪ್ಪ ಹಾಕಿ ಕವರ್ ಮಾಡಿ 1 ನಿಮಿಷ ಬೇಯಿಸಿ, ಹೀಗೆ ಎರಡು ಬದಿಯಲ್ಲಿ ಹುರಿಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments