Select Your Language

Notifications

webdunia
webdunia
webdunia
webdunia

ಬೆನ್ನು ನೋವಿನಿಂದ ಬಳಲುತ್ತಿದ್ದರೆ ಈ ಸರಳವಾದ ಮನೆಮದ್ದುಗಳನ್ನು ಮಾಡಿ..

ಬೆನ್ನು ನೋವಿನಿಂದ ಬಳಲುತ್ತಿದ್ದರೆ ಈ ಸರಳವಾದ ಮನೆಮದ್ದುಗಳನ್ನು ಮಾಡಿ..
ಬೆಂಗಳೂರು , ಶುಕ್ರವಾರ, 27 ಜುಲೈ 2018 (17:01 IST)
ಬೆನ್ನು ನೋವು ಮಧ್ಯಮ ವಯಸ್ಸಿನವರು ಮತ್ತು ಹಿರಿಯರಲ್ಲಿ ಸಾಮಾನ್ಯವಾದ ಆರೋಗ್ಯ ಸಮಸ್ಯೆಯಾಗಿದೆ. ಆದರೆ ಕೆಲವೊಮ್ಮೆ ಯುವಕರೂ ಸಹ ಈ ಸಮಸ್ಯೆಯಿಂದ ಬಳಲುತ್ತಾರೆ. ಬೆನ್ನು ನೋವು ಸ್ನಾಯು ಸೆಳೆತ, ಅನುಚಿತವಾದ ಆಹಾರ, ದೈಹಿಕ ಚಟುವಟಿಕೆಯ ಕೊರತೆ, ಸಂಧಿವಾತ, ನೀವು ಕುಳಿತುಕೊಳ್ಳುವ ಭಂಗಿ ಮತ್ತು ಗರ್ಭಾವಸ್ಥೆಯಿಂದಾಗಿ ಕಾಣಿಸಿಕೊಳ್ಳಬಹುದಾಗಿದೆ.

ಇದು ನಿಮಗೆ ದಿನನಿತ್ಯದ ಚಟುವಟಿಕೆಗಳನ್ನು ನಡೆಸಲು ಕಷ್ಟವನ್ನುಂಟುಮಾಡಬಹುದಾಗಿದೆ. ಇದರಿಂದ ತ್ವರಿತ ಪರಿಹಾರವನ್ನು ಕಂಡುಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಪ್ರಯತ್ನಿಸಿ ನೋಡಿ.
 
* ನೋವಿರುವ ಭಾಗಕ್ಕೆ ಶುಂಠಿ ಪೇಸ್ಟ್ ಮತ್ತು ನೀಲಗಿರಿ ಎಣ್ಣೆಯನ್ನು ಹಚ್ಚಿಕೊಳ್ಳಿ.
 
* ಒಂದು ಇಂಚು ಶುಂಠಿಯನ್ನು ಸ್ಲೈಸ್‌ಗಳಾಗಿ ಮಾಡಿ ಅದನ್ನು 1 - 2 ಲೋಟ ನೀರಿಗೆ ಹಾಕಿ 15 ರಿಂದ 20 ನಿಮಿಷ ಕುದಿಸಿ. ಹೀಗೆ ಕುದಿಸಿದ ನೀರನ್ನು ಸ್ವಲ್ಪ ಆರಲು ಬಿಟ್ಟು ನಂತರ ಸೋಸಿಕೊಂಡು ಅದಕ್ಕೆ ಜೇನನ್ನು ಸೇರಿಸಿ ಕುಡಿಯಿರಿ. ಹೀಗೆ ಮಾಡಿಕೊಂಡು ದಿನಕ್ಕೆ 2-3 ಬಾರಿ ಕುಡಿಯಬೇಕು. ಕೆಲವು ದಿನಗಳವರೆಗೆ ಅಥವಾ ನಿಮಗೆ ಅದರ ಪರಿಣಾಮ ತಿಳಿಯುವವರೆಗೆ ಕುಡಿಯುತ್ತಿರಬೇಕು.
 
* ಒಂದು ಲೋಟ ನೀರಿಗೆ 10-15 ತುಳಸಿ ಎಲೆಗಳನ್ನು ಹಾಕಿ ನೀರು ಅರ್ಧದಷ್ಟಾಗುವವರೆಗೂ ಚೆನ್ನಾಗಿ ಕುದಿಸಿರಿ. ನಂತರ ಅದು ತಣ್ಣಗಾಗಲು ಬಿಟ್ಟು ಅದಕ್ಕೆ ಚಿಟಿಕೆ ಉಪ್ಪನ್ನು ಸೇರಿಸಿ. ನೋವು ಸ್ವಲ್ಪ ಕಡಿಮೆಯಿದ್ದರೆ ದಿನಕ್ಕೆ ಒಮ್ಮೆ ಇದನ್ನು ಕುಡಿಯಿರಿ, ತುಂಬಾ ನೋವಿದ್ದರೆ ದಿನಕ್ಕೆ 2 ಬಾರಿ ಕುಡಿಯಿರಿ.
 
* ಒಂದು ಕಪ್ ಗಸಗಸೆ ಮತ್ತು ಒಂದು ಕಪ್ ಕಲ್ಲುಸಕ್ಕರೆಯನ್ನು ಸೇರಿಸಿ ಪುಡಿಮಾಡಿಟ್ಟುಕೊಳ್ಳಿ. ಇದನ್ನು ಪ್ರತಿದಿನ ಹಾಲಿನೊಂದಿಗೆ ಎರಡು ಚಮಚ ಸೇವಿಸಿ.
 
* ಗಿಡಮೂಲಿಕೆಯ ತೈಲವನ್ನು ದಿನವೂ ನಿಮ್ಮ ಬೆನ್ನನ್ನು ಮಸಾಜ್ ಮಾಡುವುದರಿಂದ ನಿಮ್ಮ ದೇಹದ ಸ್ನಾಯುಗಳು ಸಡಿಲವಾಗುತ್ತದೆ ಮತ್ತು ಇದು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಯಾವುದೇ ರೀತಿಯ ತೈಲವನ್ನು ಉದಾ: ನೀಲಗಿರಿ ತೈಲ, ಬಾದಾಮಿ ಎಣ್ಣೆ, ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ನೀವು ಬಳಸಬಹುದು.
 
* ಬೆಳ್ಳುಳ್ಳಿಯು ನಿಮ್ಮ ಬೆನ್ನು ನೋವು ನಿವಾರಣೆಗೆ ಇನ್ನೊಂದು ಮುಖ್ಯ ಔಷಧವಾಗಿದೆ. ಪ್ರತಿದಿನ 2-3 ಬೆಳ್ಳುಳ್ಳಿ ಎಸಳುಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಮತ್ತು ಬೆಳ್ಳುಳ್ಳಿ ಎಣ್ಣೆಯಿಂದ ಬೆನ್ನನ್ನು ಮಸಾಜ್ ಸಹ ಮಾಡಬಹುದು. ಒಳ್ಳುಳ್ಳಿ ಎಣ್ಣೆಯನ್ನು ಮಾಡಲು ಸಾಸಿವೆ ಎಣ್ಣೆ, ತೆಂಗಿನ ಎಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ತೆಗೆದುಕೊಳ್ಳಿ ಮತ್ತು ಅದರಲ್ಲಿ 8-10 ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಅದು ಕಂದು ಬಣ್ಣವಾಗುವವರೆಗೆ ಹುರಿದು ನಂತರ ಅದನ್ನು ಸೋಸಿಕೊಳ್ಳಿ. ಈ ಎಣ್ಣೆಯಿಂದ ನಿಮ್ಮ ಬೆನ್ನನ್ನು ಚೆನ್ನಾಗಿ ಮಸಾಜ್ ಮಾಡಿಸಿಕೊಳ್ಳಿ ಮತ್ತು ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಕೊಳ್ಳಿ.
 
ಬೆನ್ನು ನೋವಿಗೆ ವಿಶ್ರಾಂತಿಯು ಮಾರಕವಾಗಿದ್ದು ಸಾಧ್ಯವಾದಷ್ಟೂ ಚಟುವಟಿಕೆಯಿಂದ ಇರಬೇಕು. ಹೆಚ್ಚು ಹೆಚ್ಚು ನಡೆಯುವುದು ಮತ್ತು ಕೈ ಕಾಲುಗಳಿಗೆ ಪೂರಕವಾಗಿರುವ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಿ. ದಿನವೂ ರಾತ್ರಿ ಚೆನ್ನಾಗಿ ನಿದ್ದೆ ಮಾಡಿ. ಹೀಗೆ ನಿಮ್ಮ ಬೆನ್ನು ನೋವನ್ನು ನೀವೇ ಮನೆಯಲ್ಲಿಯೇ ಪರಿಹರಿಸಿಕೊಳ್ಳಬಹುದಾಗಿದ್ದು ಪ್ರಯತ್ನಿಸಿ ನೋಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಸುಟ್ಟ ಬ್ರೆಡ್ ಸೇವಿಸುವುದು ಡೇಂಜರ್! ಯಾಕೆ ಇದನ್ನು ಓದಿ!